ಕರ್ತವ್ಯ ನಿರ್ವಹಿಸುತ್ತಿರುವವರ ಮಾಹಿತಿ ಸಂಗ್ರಹಿಸಿ- ಡಾ. ಹಂಪಣ್ಣ

ರಾಯಚೂರು,ನ.೦೭- ತಹಸೀಲ್ದಾರರು, ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮಾಹಿತಿ ಶೀಘ್ರ ಸಲ್ಲಿಸಬೇಕು. ಮಾಹಿತಿಯನ್ನು ನಿಗಧಿಪಡಿಸಿದ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕೆಂದು ತಹಶೀಲ್ದಾರ ಡಾ.ಹಂಪಣ್ಣ ಅವರು ತಿಳಿಸಿದರು.
ಅವರು ನ.೬ರ ಶುಕ್ರವಾರ ನಗರದ ತಹಶೀಲ್ದಾರ ಕಚೇರಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕೋವಿಡ-೧೯ ಲಸಿಕೆ ನೀಡುವುದರ ಕುರಿತು ತಾಲೂಕ ಮಟ್ಟದ ಟಾಸ್ಕ್ ಫೋರ್ಸ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕ ಆರೋಗ್ಯ ಅಧಿಕಾರಿಗಳು ಲಸಿಕೆಯನ್ನು ಎಲ್ಲ ಆರೋಗ್ಯ ಇಲಾಖೆ, ಖಾಸಗಿ ಆಸ್ಪತ್ರೆ, ನರ್ಸಿಂಗ ಹೊಂ, ದಂತ ವೈದ್ಯರು ಮತ್ತು ಆಯುಷ ಇಲಾಖೆಯವರಿಗೆ ಲಸಿಕೆ ನೀಡಬೇಕಾಗಿರುವದರಿಂದ ಸದರಿಯವರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯವರು ನಮಗೆ ಸಲ್ಲಿಸಬೇಕು ಎಂದು ಹೇಳಿದರು.
ಕರ್ತವ್ಯ ನಿರ್ವಹಿಸುವವರ ಆಧಾರದ ಮೇಲೆ ಕೋವಿಡ-೧೯ ಲಸಿಕೆ ವಿತರಿಸಲಾಗುತ್ತದೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಾಹಿತಿ ನಿಮಗೆ ಈಗಾಗಲೇ ನೀಡಿರುವ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ಒಂದು ಪಕ್ಷ ಸಲ್ಲಿಸಿದೇ ಇದ್ದಲ್ಲಿ ನಿಮಗೆ ಲಸಿಕೆ ಸರಬರಾಜು ಆಗುವದಿಲ್ಲ. ಪ್ರಯುಕ್ತ ತಪ್ಪದೇ ಮಾಹಿತಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಕೂರ ತಾಲೂಕ ಮೇಲ್ವಿಚಾರಕ ರಂಗರವ್ ಕುಲಕರ್ಣಿ, ನಗರ ಸಂಸ್ಥೆಯ ವೈದ್ಯಾಧಿಕಾರಿ ವರಲಕ್ಷ್ಮೀ, ಗುರುರಾಜ ಎಂ.&ಇ. ಬಸನಗೌಡ, ಹಾಗೂ ಆಯುಷ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆ ದಂತ ವೈದ್ಯರ ಸಂಘದವರು ಹಾಜರಿದ್ದರು.