ಲಿಂಗಸುಗೂರು,ಜು.೧೯-
ತಾಲೂಕಿನ ಪರಿಶಿಷ್ಟ ಜಾತಿ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯ ವಾರ್ಡನ್‌ರವರು ಕರ್ತವ್ಯ ನಿರ್ಲಕ್ಷ್ಯದಿಂದ ಬೇಜವಾಬ್ದಾರಿತನ ಆಡಳಿತಕ್ಕೆ ಬೇಸತ್ತು ವಸತಿ ನಿಲಯದಲ್ಲಿ ವಾರ್ಡನ್ ವಿರುದ್ಧ ಪ್ರತಿಭಟನೆ ನಡೆಸಿ ಅಧಿಕಾರಿಗಳ ಕಾರುಬಾರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಕಳೆದ ವಾರ ವಿದ್ಯಾರ್ಥಿನಿಯರು ಎಸ್‌ಎಫ್‌ಐ ಸಂಘಟನೆ ಸಹಭಾಗಿತ್ವದಲ್ಲಿ ಹೋರಾಟ ನಡೆಸಿ ನಿಲಯ ಪಾಲಕರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಬೆಂಗಳೂರು ಕಛೇರಿ ಅಧಿಕಾರಿಳಿಗೆ ಮನವಿ ಸಲ್ಲಿಸಿ ಕೂಡಲೇ ಅಮಾನತು ಮಾಡಲು ಮುಂದಾಗಬೇಕು ಎಂದು ಹಲವು ಬೇಡಿಕೆಗಳು ಸಲ್ಲಿಸಿದ್ದಾರೆ.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ(ಪದವಿ) ಹಾಸ್ಟೇಲ್‌ನಲ್ಲಿ ಕನಿಷ್ಟ ಅಗತ್ಯ ಮೂಲಭೂತ ಸೌಕರ್ಯ ನೀಡದ ಮೆನು ಚಾಟ್ ಹಾಕದೆ ಸರಿಯಾದ ಸಮಯಕ್ಕೆ ಊಟ ಸ್ವಚ್ಛತೆ ನೀಡುವಲ್ಲಿ ವಿಫಲರಾದ ಮತ್ತು ಮೂಲಭೂತ ಸೌಕರ್ಯಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಿರುವ ವಿದ್ಯಾರ್ಥಿ ವಿರೋಧಿ ವಾರ್ಡನ್ ನಾಗರತ್ನ ಅವರನ್ನು ಅಮಾನತು ಮಾಡಲು ಆಗ್ರಹಿಸಿ ಮತ್ತು ಹಾಸ್ಟೇಲ್‌ಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಆಗ್ರಹಿಸಿ ಮಂಗಳವಾರದಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಎಂಹೆಚ್ ಬಿಲ್ಡಿಂಗ್‌ನಲ್ಲಿ ಅಪರ ನಿರ್ದೇಶಕಿ ವಾಣಿ ಎನ್ ಅವರಿಗೆ ನೀಡಲಾಯಿತು.
ಇನ್ನು ವಿದ್ಯಾರ್ಥಿ ಗಳಿಗೆ ಅಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದೇ ಅನಿವಾರ್ಯ ವಾಗಿ ಹಾಸ್ಟೆಲ್ ನಲ್ಲಿ ದಿನಗಳೆಯುವಂತಾಗಿದೆ. ಹಾಸ್ಟೆಲ್ ವಾರ್ಡನ್ ನಾಗರತ್ನಾ ಹಾಸ್ಟೆಲ್ ಗೆ ವಾರಕೊಮ್ಮೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳ ಕರೆ ಸ್ವೀಕರಿಸುತ್ತಿಲ್ಲ. ಸೌಲಭ್ಯ ಕೇಳಿದ ವಿದ್ಯಾರ್ಥಿಗಳಿಗೆ ವಾರ್ಡನ್ ದಮ್ಕಿ ಹಾಕುತ್ತಿದ್ದಾರೆ. ಹಾಗೂ ಸೌಲಭ್ಯ ಕೇಳುವ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ತಣ್ಣಗಾಗಿಸುವ ಪ್ರಯತ್ನ ಮಾಡಿ ಸೌಲಭ್ಯ ನೀಡದೇ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಲಿಂಗಸುಗೂರು ಪಟ್ಟಣದ ಮೆಟ್ರಿಕ್ ನಂತರ (ಪದವಿ) ಬಾಲಕಿಯರ ಹಾಸ್ಟೆಲ್ ಒಳಗಡೆ ನುಗ್ಗಿ ಸ್ಥಳೀಯ ಪುಡಾರಿಗಳು ಕೋಣೆ ಒಳಗಡೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದರೂ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಿಲ್ಲ. ಪ್ರಶ್ನಿಸಿದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನೇಕ ಬಾರಿ ದಮ್ಕಿ ಹಾಕಿದ್ದು ಇದೆ. ಅಲ್ಲದೇ ಯಾವುದೇ ಇಲಾಖೆಯ ಅದೇಶವಿಲ್ಲದೆ ಬಿಲ್ಡಿಂಗ್‌ಗೆ ಪೇಂಟಿಂಗ್ ಮಾಡಿಸುವ ನೆಪವೊಡ್ಡಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಅನಧಿಕೃತವಾಗಿ ಹೊರ ಹಾಕಿದ್ದಾರೆ.
ಕರ್ತವ್ಯ ಲೋಪ ಎಸಗಿದ ವಾರ್ಡನ್ ನಾಗರತ್ನಾ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಪ್ರಭಾರಿ ಸಹಾಯಕ ನಿರ್ದೇಶಕರನ್ನು ನೇಮಿಸಿದ್ದು, ಅವರು ಈ ಕಛೇರಿಯಲ್ಲಿ ಲಭ್ಯವಾಗುತ್ತಿಲ್ಲ. ಆದ್ದರಿಂದ ಖಾಯಂ ಆಗಿ ಸಹಾಯಕ ನಿರ್ದೇಶಕರನ್ನು ನೇಮಿಸಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ.
ವಾರ್ಡನ್‌ರನ್ನು ಈ ಕೂಡಲೇ ಅಮಾನತು ಮಾಡಬೇಕು.ಈ ಹಾಸ್ಟೇಲ್ ಸೇರಿ ಜಿಲ್ಲೆಯ ಎಲ್ಲಾ ಹಾಸ್ಟೇಲ್‌ಗಳಲ್ಲಿ ಮೆನು ಚಾಟ್ ಹಾಕಿ ಗುಣಮಟ್ಟದ ಆಹಾರ ನೀಡಬೇಕು. ಶುಚಿ ಕಿಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಬೇಕು. ಗ್ರಂಥಾಲಯ ವ್ಯವಸ್ಥೆ ಮಾಡಬೇಕು. ೧೦೦ ವಿಧ್ಯಾರ್ಥಿಗಳು ವಸತಿ ಇರಬೇಕಿದ್ದ ಹಾಸ್ಟೇಲ್ ನಲ್ಲಿ ೩೦೦ ವಿದ್ಯಾರ್ಥಿಗಳನ್ನು, ಇರಿಸಿದ್ದು, ಅವೈಜ್ಞಾನಿಕ ವಾಗಿದ್ದು, ಒಂದಿಷ್ಟು ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಶಿಫ್ಟ್ ಮಾಡಬೇಕು. ಬಾಲಕಿಯರಿಗೆ ಶುಚಿ ನ್ಯಾಪ್ಕಿನ್ ಒದಗಿಸಬೇಕು. ಹಾಸ್ಟೇಲ್‌ಗೆ ವಾಚ್ಮ್ಯಾನ್ ನೇಮಕ ಮಾಡಬೇಕು. ಶುದ್ದ ಕುಡಿಯುವ ನೀರು ಸೇರಿದಂತ ಅಗತ್ಯ ಸೌಲ್ಯಗಳನ್ನು ಒದಗಿಸಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಯಚೂರು ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ್, ರಾಜ್ಯ ಪದಾಧಿಕಾರಿಗಳಾದ ರಮೇಶ್ ಹಾಸನ್, ಬೀರಾಜ್, ಅಂಕಿತಾ, ರಾಯಚೂರು ಜಿಲ್ಲೆಯ ಮುಖಂಡರಾದ ಮಹಾಲಿಂಗ ಪವನ್ ಕಮದಾಳ್ ಉಪಸ್ಥಿತರಿದ್ದರು.