
ಕಲಬುರಗಿ.ಮಾ.07:ಆಳಂದ ತಾಲೂಕಿನ ಕೋತನಹಿಪ್ಪರಗಾ ನಿವಾಸಿ ನಾಗಾಲ್ಯಾಂಡ್ ರಾಜ್ಯದ ದಿಮ್ಮಾಪೂರ ಸಿಆರ್‍ಪಿಎಫ್‍ನ 78ನೇ ಬಟಾಲೀಯನ್ (ಸಬ್ ಇನ್ಸಪೆಕ್ಟರ್) ಕರ್ತವ್ಯ ನಿರತ ಯೋಧ ವಿಠ್ಠಲ ಪಾಂಡುರಂಗ ಲುಗದೆ (55) ಅವರು ಮಾರ್ಚ್ 5ರಂದು ಆಕಸ್ಮಿಕವಾಗಿ ದಿಮ್ಮಾಪೂರ ಜಿಲ್ಲೆಯ ಜಿಬ್ಜಾದಲ್ಲಿ ನಿಧನರಾಗಿದ್ದಾರೆ.
ಯೋಧರಿಗೆ ಪತ್ನಿ ಜಾಂಬವತಿ, ಇಬ್ಬರು ಹೆಣ್ಣು ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಯೋಧನ ಪಾರ್ಥಿವ ಶರೀರವನ್ನು ಮಂಗಳವಾರ ಸ್ವಗ್ರಾಮ ತಾಲೂಕಿನ ಕೋತನಹಿಪ್ಪರಗಾಕ್ಕೆ ಬರುತ್ತಿದ್ದಂತೆ ತಾಲೂಕು ಆಡಳಿತ ಸೇರಿ ಗ್ರಾಮಸ್ಥರು ಕುಟುಂಬಸ್ಥರು ಸೇರಿ ಸಕಲ ಸರ್ಕಾರಿ ಗೌರವದೊಂದಿಗೆ ಸ್ವಾಗತಿಸಿ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಕೈಗೊಂಡು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.
ಗ್ರಾಪಂ ಸದಸ್ಯರು, ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು, ಸಕಲ ಗ್ರಾಮಸ್ಥರು ಸೇರಿ ಅಗಲಿದ ಯೋಧನಿಗೆ ಕಣ್ಣೀರು ಹಾಕಿ, ಪುಷ್ಪಾರ್ಚನೆ ಮೂಲಕ ಅಂತಿಮ ನಮನ ಸಲ್ಲಿಸಿದರು.
ಆಗಮಿಸಿದ್ದ ಸಿಆರ್‍ಪಿಎಫ್ ಯೋಧರು ಸರ್ಕಾರಿ ವಿಧಿ ವಿಧಾನ ಮೂಲಕ ಅಂತ್ಯಕ್ರಿಯೆ ವಿಧಾನ ಕೈಗೊಂಡರು ಅಲ್ಲದೆ, ಗ್ರಾಮಸ್ಥರಿಂದಲೂ ಸಹ ಧಾರ್ಮಿಕ ವಿಧಿ ವಿಧಾನವು ಕೈಗೊಂಡು ಅಂತಿಕ್ರಿಯೆ ನೆರವೇರಿಸಲಾಯಿತು.
ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಹಾದೇವ ಪಂಚಮುಖಿ ನೇತೃತ್ವದಲ್ಲಿ ಸಿಬ್ಬಂದಿಗಳು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಅಲ್ಲಾವೋದ್ದೀನ ಶೇಖ, ಗ್ರಾಮ ಆಡಳಿತಾಧಿಕಾರಿ ದತ್ತಾತ್ರೆಯ ರಾಠೋಡ, ಗ್ರಾಪಂ ಸದಸ್ಯ ಪ್ರಕಾಶ ಪಾಟೀಲ, ಮಿಲಿಂದ ಕಾಂಬಳೆ, ರೇಖಾ ಇಸ್ರಾಜಿ, ಮಂದಿರÀಬಾಯಿ ಬಿ. ಜಮಾದಾರ, ಪ್ರಭುದ್ಧ ಆರ್. ಪಾಟೀಲ, ಶಿವುಕುಮಾರ ಜಮಾದಾರ ರುದ್ರವಾಡಿ, ಹಿರಿಯ ಮುಖಂಡ ಅಮರ ಇಸ್ರಾಜಿ, ವೆಂಕಟ ಪಾಟೀಲ, ಬಳಿರಾಮ ಬಿರಾದಾರ, ವಿರೂಪಾಕ್ಷಪ್ಪ ಕಲಶೆಟ್ಟ, ಅರ್ಜುನ ಮೈಂದೆ, ಸಂಜೀವನ್ ರಜಪೂತ, ಅನುಕೂಲ ಲುಗದೆ, ಬಾಜೀರಾವ್ ಪಾಟೀಲ, ಪಂಡಿರಿನಾಥ ಯವೂತೆ, ಪರತಪ್ಪ ಇಸ್ರಾಜಿ, ಗ್ರಾಪಂ ಕಾರ್ಯದರ್ಶಿ ರಾಜೇಂದ್ರ ಇಸ್ರಾಜಿ, ವರ್ಷಿಕೇತ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಿವೃತ್ತ ಸೈನಿಕ ಮಹಾದೇವ ಬೆಳಂಬೆ, ಸಿದ್ಧಲಿಂಗ ಮಲಶೆಟ್ಟಿ, ಹಣಮಂತ ಧುತ್ತರಗಾಂವ, ಶ್ರೀಶೈಲ ಕಪಟೆ, ಶ್ರೀಮಂತ ಇಸ್ರಾಜಿ, ಅನೀಲ ಮಾಲಿಪಾಟೀಲ, ಶ್ರೀಮಂತ ಅಟ್ಟೂರೆ, ನಟರಾಜ ಪಾಟೀಲ ಸೇರಿದಂತೆ ನಿವೃತ್ತ ಸೈನಿಕ ಅಭಿವೃದ್ಧಿ ಸಂಘದ ತಾಲೂಕು ಮುಖಂಡರು ಭಾಗವಹಿಸಿದ್ದರು.
ಯೋಧನ ಅಗಲಿಕೆಯಿಂದ ಪತ್ನಿ ಜಾಂಬವತಿ ಮತ್ತು ಮಕ್ಕಳ ಕುಟುಂಬಸ್ಥರ ರೋಧನೆ ಹೃದಯ ಕಲುಕುವಂತ್ತಿತ್ತು.