ಕರ್ತವ್ಯ ನಿರತೆಯಲ್ಲೂ ಮಾನವೀಯತೆ ಮೆರೆದ ಎ.ಎಸ್.ಐ. ಅಬ್ಬಾಸ್

ಕೊಟ್ಟೂರು 24 : ಪಟ್ಟಣದಲ್ಲಿ ಕರೋನಾ 2ನೇ ಅಲೆ ಹಾವಳಿಯಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ ಕರ್ಫೂ ಇರುವುದರಿಂದ ಹೊಟೇಲ್ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾದ ಬಂದ್ ಆಗಿವೆ. ಈ ಮಧ್ಯೆ ಊಟಕ್ಕಿಲ್ಲದೆ ಪರದಾಡುತ್ತಿದ್ದ ಅನಾಥರಿಗೆ ಎ.ಎಸ್.ಐ ಅಬ್ಬಾಸ್ ಅವರು ಮನೆಯಿಂದಲ್ಲೇ ಆಹಾರ ಪೊಟ್ಟಣಗಳನ್ನು ತಂದು ಬಡವರಿಗೆ ಹಾಗೂ ಅನಾಥರಿಗೆ ನೀಡಿ ಮಾನವೀಯತೆ ಮೆರೆದರು.
ಕೊಟ್ಟೂರಿನ ಬಸ್‍ಸ್ಟ್ಯಾಂಡ್‍ನಲ್ಲಿ ಊಟವಿಲ್ಲದೆ ಪರದಾಡುತ್ತಿದ್ದ ಅನಾಥ ಹೆಣ್ಣುಮಗಳೊಬ್ಬಳು ಕುಳಿತಿರುವ ಪರಿಸ್ಥಿತಿಯನ್ನು ನೋಡಿ ಎ.ಎಸ್.ಐ. ಅಬ್ಬಾಸ್‍ರವರು ಮನೆಯಿಂದಲೇ ಆಹಾರ ತಂದು ನೀಡುತ್ತಿರುವುದು ನಿಜಕ್ಕೂ ಮನಸ್ಸು ಕರಗುವ ವಿಷಯವಾಗಿದೆ.
ಪೊಲೀಸರು ಎಂದರೆ ಬರೀ ಲಾಠಿ ಹಿಡಿದು ಜನರನ್ನು ಹೆದರಿಸುತ್ತಾರೆ ಎನ್ನುವದಲ್ಲ ಲಾಠಿ ಹಿಡಿದು ಹೆದರಿಸುವುದು ಎಲ್ಲರ ಒಳಿತಿಗಾಗಿ ಎನ್ನುವುದು ನಿಜ. ಆದರೆ ಕಷ್ಟದ ಪರಿಸ್ಥಿತಿಯನ್ನು ನೋಡಿದರೆ ಯಾರಿಗಾದರೂ ಮನ ಕರಗುವುದು. ಅದರಂತೆ ಆರಕ್ಷಕ ಎಂದರೆ ರಕ್ಷಕರೇ ಎನ್ನುವುದು ಈ ದೃಶ್ಯವನ್ನು ನೋಡಿದರೆ ನಿಜವೆನಿಸುತ್ತದೆ.