ಕರ್ತವ್ಯಲೋಪ ಆಡಳಿತಾಧಿಕಾರಿ ಅಮರೇಶ ಅಮಾನತ್ತು

ಮಾನ್ವಿ,ಮೇ.೦೮- ತಾಲೂಕಿನ ನಂದಿಹಾಳ ಗ್ರಾಮ ಲೆಕ್ಕಾಧಿಕಾರಿ ಹಾಗೂ ಚುನಾವಣೆ ಆಡಳಿತಾಧಿಕಾರಿ ಅಮರೇಶ ಇವರನ್ನು ಚುನಾವಣೆ ಕರ್ತವ್ಯ ಲೋಪದಡಿ ಚುನಾವಣಾ ಅಧಿಕಾರಿಗಳು ಅಮಾನತು ಮಾಡಿ ಆದೇಶ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ಜನರಲ್ ಅಬ್ಸರ್ವರ್ ಅಧಿಕಾರಿಗಳು ತಾಲೂಕ ದಂಡಧಿಕಾರಿ ಕಛೇರಿಯಲ್ಲಿ ಎಪ್ರಿಲ್ ೦೫ ಮತ್ತು ೨೩ ರಂದು ಅಗಮಿಸುತ್ತಾರೆ ಕ್ಷೇತ್ರದ ಎಲ್ಲ ಅಡಳಿತ ಅಧಿಕಾರಿಗಳು ಮುಂಚಿತವಾಗಿ ಹಾಜರಿ ಇರುವಂತೆ ಸೂಚಿಸಲಾಗಿತ್ತು ಹಾಗೂ ಎಪ್ರಿಲ್ ೨೫ ರಂದು ನಂದಿಹಾಳ ಗ್ರಾಮದ ಮತಗಟ್ಟೆಗೆ ಚುನಾವಣೆ ಅಧಿಕಾರಿಗಳು ಭೇಟಿ ನೀಡಿದರೂ ಕೂಡ ಗೈರು ಹಾಜರಿಯಲ್ಲಿದ್ದ ಅಮರೇಶ ಗ್ರಾಮ ಲೆಕ್ಕಾಧಿಕಾರಿಗೆ ಕಾರಣ ಕೇಳಿ ಎಪ್ರಿಲ್ ೨೭ ರಂದು ತಾಲೂಕ ಚುನಾವಣೆ ಅಧಿಕಾರಿಗಳು ನೋಟಿಸ್ ನೀಡದರು ಕೂಡ, ಪ್ರತ್ಯುತ್ತರ ನೀಡದ ಹಿನ್ನೆಲೆಯಲ್ಲಿ ನಂದಿಹಾಳ ಗ್ರಾಮದ ಆಡಳಿತ ಅಧಿಕಾರಿ ಅಮರೇಶ ಇವರನ್ನು ಚುನಾವಣೆ ಕರ್ತವ್ಯ ಲೋಪ ಕಾನೂನಿನ ಅಡಿಯಲ್ಲಿ ಜಿಲ್ಲಾಧಿಕಾರಿ ನಡಾವಳಿಗಳು ಅಡಿಯಲ್ಲಿ ತಾಲೂಕ ಚುನಾವಣೆ ಅಧಿಕಾರಿಗಳು ಅಮಾನತು ಮಾಡಿ ಆದೇಶ ನೀಡಿದ್ದಾರೆ.