ಕರ್ತವ್ಯದಲ್ಲಿ ಪ್ರಮಾಣೀಕತೆ ಇರಲಿ : ಟಿ.ವಿ.ಪ್ರಕಾಶ್.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಫೆ.22; ಸೇವೆಯಲ್ಲಿ ಸಮಯ ಪ್ರಜ್ಞೆ, ಪ್ರಾಮಾಣಿಕತೆ ಹೊಂದಿದ್ದರೆ ಆಡಳಿತದಲ್ಲಿ ಸುಧಾರಣೆ ತರಲು ಸಾದ್ಯ ಎಂದು ನಿರ್ಗಮಿತ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಅಯೋಜಿಸಿದ್ದ ಬೀಳ್ಕೂಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಂದಾಯ ಇಲಾಖೆ ಬಹುದೊಡ್ಡದು ಇಲ್ಲಿ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸ ಆದ್ರೂ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದ ಅವರು ನಿವೃತ್ತಿಯವರೆಗೂ ಹರಪನಹಳ್ಳಿ ಉಪವಿಭಾಗದಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಆಸೆ ಇತ್ತು ಅನಿವಾರ್ಯ ಚುನಾವಣೆ ದೃಷ್ಟಿಯಿಂದ ವರ್ಗಾವಣೆಯಾಗಿದೆ ಇಲ್ಲಿವರೆಗೂ ಇಲಾಖೆ ಕೆಲಸದಲ್ಲಿ ನನಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದ ಅವರು ನೀವು ಸಹ ಉತ್ತಮವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.ನೂತನ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ, ಶಿಸ್ತು ಬಹಳ ಮುಖ್ಯ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿರುವ ಟಿ.ವಿ.ಪ್ರಕಾಶ ಅವರು ನಮಗೆಲ್ಲರಿಗೂ ಮಾದರಿ ಎಂದರು.ತಹಶೀಲ್ದಾರ ಗಿರೀಶ್ ಬಾಬು ಮಾತನಾಡಿ ಟಿ.ವಿ.ಪ್ರಕಾಶ ಅವರು ತಮ್ಮ ಆಡಳಿತದಲ್ಲಿ ನೇರ-ನುಡಿ, ದಕ್ಷತೆ ಹೊಂದಿದ್ದರು, ಸಿಟ್ಟಿನಿಂದ ಮಾತನಾಡಿದರು ಅವರ ಮನಸ್ಸಿನಲ್ಲಿ ಪ್ರೀತಿ ಇರುತ್ತಿತ್ತು, ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭಾ ಹಾರೈಸಿದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ ಮಾತನಾಡಿ ಅಧಿಕಾರದಲ್ಲಿ ಯಾವತ್ತು ರಾಜಿಯಾದೇ ನಿಷ್ಠೆ, ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿ ಟಿ.ವಿ.ಪ್ರಕಾಶ ಅವರ ಕಾರ್ಯ ನಮಗೆಲ್ಲರಿಗೂ ಸ್ಪೂರ್ತಿ ಎಂದರು.ಕೊಟ್ಟೂರು ತಾಲೂಕು ತಹಶಿಲ್ದಾರ ಜಿ.ಕೆ.ಅಂಬರೀಷ, ಹಡಗಲಿ ತಹಶಿಲ್ದಾರ ಕಾರ್ತಿಕ, ಉಪತಹಶೀಲ್ದಾರ್ ಮಲ್ಲಿಕಾರ್ಜುನ, ಎಡಿಎಲ್‌ಆರ್ ಬಳ್ಳಾರಪ್ಪ, ಮಂಗಳ ಪ್ರಕಾಶ ಕರವೇ ಅಧ್ಯಕ್ಷ ನಾಗರಾಜ, ವಕೀಲ ವೀರುಪಾಕ್ಷಪ್ಪ ಮಾತನಾಡಿದರು.ಗ್ರೇಡ್-2 ತಹಶಿಲ್ದಾರ ನಟರಾಜ, ಉಪ ತಹಶಿಲ್ದಾರ ಚಂದ್ರಮೋಹನ ವಿವಿಧ ಇಲಾಖೆಯ ಅಧಿಕಾರಿಗಳು, ಕಾಂದಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.