ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲದು:ಡಿಡಿಪಿಯು ಶಿವಶರಣಪ್ಪ

ಕಲಬುರಗಿ.ಏ.10:ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಲ್ಲಿ ನಿರ್ಲಕ್ಷ್ಯ ಮಾಡಕೂಡದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ತಾಕೀತು ಮಾಡಿದರು.
ನಗರದ ಎಂ.ಎಸ್.ಐ ಪದವಿಪೂರ್ವ ಕಾಲೇಜಿನ ಪಿಯು ಅರ್ಥಶಾಸ್ತ್ರ ವಿಷಯದ ಮೌಲ್ಯಮಾಪನ ಕೇಂದ್ರದಲ್ಲಿ ವಯೋನಿವೃತ್ತ ಪ್ರಾಂಶುಪಾಲರಿಗೆ ಮತ್ತು ಉಪನ್ಯಾಸಕರಿಗೆ ಗೌರವಿಸಿ ಮಾತನಾಡಿದರು.
ವಿಶ್ವದ ಪ್ರತಿಯೊಂದು ಕ್ರಾಂತಿಗೆ ಅರ್ಥಶಾಸ್ತ್ರವೇ ಕಾರಣ. ಕಾರಣ ಪ್ರತಿಯೊಬ್ಬರೂ ಜೀವನದಲ್ಲಿ ಸರಳತೆ ಅಳವಡಿಸಿಕೊಂಡು, ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು. ಒತ್ತಡಕ್ಕೊಳಗಾಗಿ ಮೌಲ್ಯಮಾಪನ ಮಾಡದೆ,ಸಮಚಿತ್ತದಿಂದ ಕಾರ್ಯನಿರ್ವಹಿಸಿ ಪಿಯು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಚ್‍ಕೆಇ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅರ್ಥಶಾಸ್ತ್ರ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥ ಅಶೋಕ ರಾಜೋಳೆ ಮಾತನಾಡಿ, ಉಪನ್ಯಾಸಕರು ಬಿಲ್ ಮತ್ತು ಬೆಲ್‍ಗಾಗಿ ಕಾಯದೆ ತಮ್ಮ ಕರ್ತವ್ಯ ನಿರ್ವಹಿಸಿದಾಗ ಶಿಕ್ಷಣ ಕ್ಷೇತ್ರ ಸುಧಾರಣೆಯಾಗುತ್ತದೆ. ಮೌಲ್ಯಮಾಪಕರಿಗೆ ತಾಂತ್ರಿಕಧಾರಿತ ತರಬೇತಿ ನೀಡುವುದು ಅಗತ್ಯ ಎಂದು ತಿಳಿಸಿದರು.
ಬೀದರ ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಮಾತನಾಡಿದರು.
ಸನ್ಮಾನ: ವಯೋನಿವೃತ್ತ ಪ್ರಾಚಾರ್ಯ ಚನ್ನಬಸಪ್ಪ ಗವಿ, ಬಸವರಾಜ ಹಲಕರ್ಟಿ, ಚಂದ್ರಪ್ಪ ದೊಡ್ಡಿ ಮತ್ತು ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಭಾಜನರಾದ ಮಲ್ಲಮ್ಮ ಪಾಟೀಲ್ ಹಾಗೂ ಡಾಕ್ಟರೇಟ್ ಪಡೆದ ಕರುಣಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಎಚ್‍ಕೆಇ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ವಿನಯ ಪಾಟೀಲ, ಡಿಗ್ರಿ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಬೀರನಳ್ಳಿ, ಶಿಬಿರಾಧಿಕಾರಿ ಪಾಂಡುರಂಗ, ಉಪ ಮೌಲ್ಯಮಾಪಕರಾದ ಚನ್ನಬಸಪ್ಪ ಕುಳಗೇರಿ,ಶಂಕರರೆಡ್ಡಿ, ತಿಪ್ಪಾರೆಡ್ಡಿ, ದಯಾನಂದ, ನಾಮದೇವ ಕಡಕೋಳ, ರಾಜಶೇಖರ ಮಂಗಲಗಿ ಸೇರಿದಂತೆ ಬೀದರ, ಕಲಬುರಗಿ, ಯಾದಗಿರಿ ಜಿಲ್ಲೆಯ ಪ್ರಾಚಾರ್ಯರು, ಉಪನ್ಯಾಸಕರು ಪಾಲ್ಗೊಂಡಿದ್ದರು.
ಎಂಎಸ್‍ಐ ಪಪೂ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ಸ್ವಾಗತಿಸಿದರು. ಪ್ರಾಚಾರ್ಯ ಚಂದ್ರಕಾಂತ ಗಂಗಶೆಟ್ಟಿ ಮತ್ತು ಜ್ಯೋತಿ ನಿರೂಪಿಸಿದರು. ಕೇಂದ್ರ ವೀಕ್ಷಕ ಪಂಡಿತ ಪವಾರ ವಂದಿಸಿದರು.