ಕರ್ತವ್ಯದಲ್ಲಿದ್ದ ಪಿಎಸ್​ಐ ಮೇಲೆ ಹಲ್ಲೆ :ಆರೋಪಿ ಸೆರೆ

ಬೆಂಗಳೂರು,ನ.,8- ನಿಂತಿದ್ದ ಬೈಕ್​ಗೆ ಗುದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು ಹಾಗೂ ರಾಡ್​ನಿಂದ ಸಬ್ ಇನ್ಸ್ ಪೆಕ್ಟರ್(ಪಿಎಸ್​ಐ) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಹಾಡುಹಗಲೇ ಯಶವಂತಪುರದ ಬಳಿ ನಡೆದಿದೆ.
ಶ್ರೀರಾಮಪುರ ಪೊಲೀಸ್ ಠಾಣೆಯ ತರಬೇತಿ ನಿರತ(ಪ್ರೊಬೇಷನರಿ)ಪಿಎಸ್​ಐ ಷರ್ಪುದ್ದಿನ್ ಮೇಲೆ ಹಲ್ಲೆ ಮಾಡಿದ
ಬೈಕ್ ಸವಾರ ಉದಯ್ ಕುಮಾರ್‌ನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ‌.
ಎಂದು‌ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.


ಪಿಎಸ್ಐ ಆಗಿದ್ದ ಷರ್ಪುದ್ದೀನ್ ಯಶವಂತಪುರದಲ್ಲಿ ಕರ್ತವ್ಯದಲ್ಲಿದ್ದಾಗ ಅವರ ಬೈಕ್‌ಗೆ ಸ್ಕೂಟಿಯಲ್ಲಿ ಬರುತ್ತಿದ್ದ ಆರೋಪಿ ಉದಯ್‌ಕುಮಾರ್‌‌ ಆರ್ ಟಿಓ‌ಕಚೇರಿಯ ಶಿವಣ್ಣ ಹೋಟೆಲ್ ಬಳಿ ಡಿಕ್ಕಿ ಹೊಡೆದಿದ್ದಾನೆ
ಬೈಕ್‌ಗೆ ಡಿಕ್ಕಿ ಹೊಡೆದಿರುವುದನ್ನು ಪಿಎಸ್ಐ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಲ್ಲು ಹಾಗೂ ರಾಡ್‌ಗಳಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಹೊಡೆದ ರಭಸಕ್ಕೆ ಪಿಎಸ್ ಐತಲೆ ಹಾಗೂ‌ ಮುಖದ ಭಾಗ ತರಚಿದ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದರು.