ಕರ್ತವ್ಯಕ್ಕೆ ಗೈರು;ವೈದ್ಯಾಧಿಕಾರಿ ಅಮಾನತ್ತಿಗೆ ಕ್ರಮ

ಕಲಬುರಗಿ,ಜು 15: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭವಾರಸಿಂಗ್ ಮೀನಾ ಅವರು ಅಳಂದ ತಾಲೂಕಿನ ಕಡಗಂಚಿ ಪಿ.ಎಚ್.ಸಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆಡಳಿತ ವೈದ್ಯಾಧಿಕಾರಿ ಗೈರು ಆಗಿದ್ದರು.
ಈ ಹಿನ್ನೆಲೆಯಲ್ಲಿ ಆಡಳಿತ ವೈದ್ಯಾಧಿಕಾರಿಗಳನ್ನು ಅಮಾನತ್ತಿಗೆ ಕ್ರಮ ವಹಿಸಲಾಗಿದೆ.
ಶೋಕಾಸ್ ನೋಟಿಸ್ ಜಾರಿ;
ನರೋಣಾ ಸಿ.ಎಚ್.ಸಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿದÀ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಇರಲಿಲ್ಲ. ವೈದ್ಯರ ಗೈರು ಹಿನ್ನೆಲೆಯಲ್ಲಿ ನರೋಣಾ ಆಡಳಿತ ವೈದ್ಯಾಧಿಕಾರಿಗೆ ಜಿ.ಪಂ. ಸಿ.ಇ.ಓ ಶೋಕಾಸ್ ನೋಟಿಸ್ ಜಾರಿಗೊಳಿಸಿದರು. ವೈದ್ಯರಿಂದ ಉತ್ತರ ಪಡೆದು ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.