ಕರ್ಜಿಕಾಯಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ:
ಖೋವ-ಮುಕ್ಕಾಲು ಕಪ್‌ ಮೈದಾ ಹಿಟ್ಟು-1 ಕಪ್‌
ತುಪ್ಪ-3 ಟೀ ಸ್ಪೂನ್‌ ಎಣ್ಣೆ-ಕರಿಯಲು,
ಉಪ್ಪು-1 ಚಿಟಿಕೆ
ಹೂರಣಕ್ಕೆ ಒಣ ಅಂಜೂರ ಹಣ್ಣಿನ ತುಂಡುಗಳು-ಅರ್ಧ ಕಪ್‌
ಬೀಜ ತೆಗೆದ ಖರ್ಜೂರ-ಅರ್ಧ ಕಪ್‌, ಗೋಡಂಬಿ-10, ಬಾದಾಮಿ-10, ವಾಲ್ನಟ್‌-10
ಮಾಡುವ ವಿಧಾನ: ಒಣ ಹಣ್ಣುಗಳನ್ನು ಸಣ್ಣಗೆ ಕತ್ತರಿಸಿ ಇಡಿ. ಪಾತ್ರೆಗೆ ಮೈದಾ, ಉಪ್ಪು ಮತ್ತು ತುಪ್ಪ ಹಾಕಿ ಮಿಕ್ಸ್‌ ಮಾಡಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾದ ಹಿಟ್ಟು ಕಲಸಿ. ಇದರ ಮೇಲೆ ತೇವದ ಬಟ್ಟೆ ಹಾಕಿ ಇಪ್ಪತ್ತು ನಿಮಿಷಗಳ ಕಾಲ ಮುಚ್ಚಿಡಿ. ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ಖೋವ ಹಾಕಿ ಜಿಡ್ಡಿನ ಅಂಶ ಹೋಗುವವರೆಗೆ ಹುರಿದಿಡಿ. ಬಳಿಕ ಇದಕ್ಕೆ ಒಣ ಹಣ್ಣುಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕಲಸಿಟ್ಟ ಮೈದಾ ಹಿಟ್ಟಿನಿಂದ ಪೂರಿಗಳನ್ನು ಲಟ್ಟಿಸಿ. ಇದರ ಮಧ್ಯ ಒಂದು ಟೇಬಲ್‌ ಸ್ಪೂನ್‌ನಷ್ಟು ಹೂರಣ ತುಂಬಿಸಿ, ಅಂಚನ್ನು ತೇವಗೊಳಿಸಿ ಕರ್ಜಿಕಾಯಿಯಂತೆ ಮಡಚಿ. ಅಥವಾ ಇದರ ಮೇಲೆ ಇನ್ನೊಂದು ಪೂರಿಯಿಟ್ಟು ಅಂಚು ಮಡಚಿ ಗೋಲಾಕಾರವಾಗಿಯೂ ಮಾಡಬಹುದು. ಇದನ್ನು ಕಾದ ಎಣ್ಣೆಯಲ್ಲಿ ಕರಿದು ಗಾಳಿಯಾಡದ ಡಬ್ಬದಲ್ಲಿ ಇಡಿ.