ಕರ್ಚಿಗನೂರುನಲ್ಲಿ ಪ್ರಭುಲಿಂಗಲೀಲೆ ಪುರಾಣ ಮಹಾಮಂಗಲೋತ್ಸವ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 23 : ಕಳೆದ ಹದಿನೆಂಟು ದಿನಗಳಿಂದ ನಡೆದ  ಐವತ್ತನೇ ವರ್ಷದ   ಪ್ರಭುಲಿಂಗಲೀಲೆ ಪುರಾಣ ಪ್ರವಚನದ  ಮಹಾಮಂಗಲೋತ್ಸವ ನಿನ್ನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ನಡೆಯಿತು.
ಜಗದ್ಗುರು ಡಾ ಸಂಗನಬಸವ ಸ್ವಾಮಿಗಳು  ಲಿಂಗಕ್ಯರಾದ ನಿಮಿತ್ತ ಸಭೆಯಲ್ಲಿ ಅವರಿಗೆ ಭಾವಪೂರ್ಣ ಭಕ್ತಿ ಸಮರ್ಪಣೆ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ  ಶ್ರೀ ಮಠದ ಪೀಠಧ್ಯಕ್ಷ ಅಭಿನವ ಮಹಾಂತ ಮಹಾಸ್ವಾಮಿಗಳು. ಸಕಲಜೀವಿಗಳ ಜೊತೆ ಮಾನವಿತೆಯೊಂದಿಗೆ ಬದುಕಿದರೆ ಮಾತ್ರ ಮಾನವನಾಗಿ ಹುಟ್ಟಿದಕ್ಕೆ ಸಾರ್ತಕ ಎಂದರು.
 ಕಲ್ಯಾಣ ಸ್ವಾಮಿಗಳು ಬಳ್ಳಾರಿ, ಅಭಿನವ ಪ್ರಭು ಸ್ವಾಮಿಗಳು ಕಂಪ್ಲಿ, ಬಸವಲಿಂಗ ಸ್ವಾಮಿಗಳು ಬಟಗುಕಿ೯, ಪ್ರಭುಲಿಂಗ ಲೀಲೆ ಪುರಾಣ ಪ್ರವಚನ ಹೇಳಿದ  ವಿರುಪಾಕ್ಷ ಸ್ವಾಮಿಗಳು ಚೀಕಲಪರ್ವಿ, ಸಂಗೀತ ಬಳಗದ ವೆಂಕಟಾಪುರ ಬಸವರಾಜ ಶರಣರು ,ಹಾಗು ಹರಗುರ ಶರಣರು ಭಕ್ತರು ಶರಣ ಶರಣಿಯರು ಭಾಗವಹಿಸಿದ್ದರು.
 ಗ್ರಾಮದಲ್ಲಿ ಆಂಜಿನಯ್ಯ ದೇವಸ್ಥಾನದ ಗರಡುಗಂಭ ಸ್ಥಾಪನೆ ಹಾಗು ಮಹಿಸಾಸುರ ಮರ್ಧಿನಿ  ದೇವಿ  ಪ್ರತಿಸ್ಠಾಪನೆ ಮತ್ತು ಶ್ರೀ ಮಹಾಂತ ಶಿವಯೋಗಿಗಳ ಬೆಳ್ಳಿ ಮೂರ್ತಿ ನೂತನ ರಥೋತ್ಸವ ಕಾರ್ಯಕ್ರಮ ಬಹಳ ಭಕ್ತಿ ಪರ್ವದೊಂದಿಗೆ ಜರುಗಿತು.
ಕರ್ಚಿಗನೂರು ಮತ್ತು  ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಇದರಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಎಂ. ಆರ್. ಬಸವನಗೌಡ, ರಜೇಗೌಡ,ಶಂಕರಗೌಡ, ಎರ್ರೇಗೌಡ ಸಿ, ಚಾನಾಳ್ ಮಂಜುನಾಥ, ರೇವಣ್ಣ ಶಾಸ್ತ್ರಿ , ಮಠದ ಬಸಯ್ಯಸ್ವಾಮಿ , ಕೆ ಪಿ ಚನ್ನಬಸವರಾಜ ಮೊದಲಾದವರು ಪಾಲ್ಗೊಂಡಿದ್ದರು.