ಕರೋನ ಸಂಕಷ್ಟದಲ್ಲೂ ಆರ್ಥಿಕ ಪ್ರಗತಿ ಸಾಧಿಸಿದ ಸಂಡೂರು ಸಹಕಾರಿ ಬ್ಯಾಂಕು.

ಸಂಡೂರು :ಏ:2 ಪ್ರಸಕ್ತ 2020-21 ನೇ ಸಾಲಿನಲ್ಲಿ ಆರ್ಥಿಕ ಹಿಂಜರಿತದ ನಡುವೆಯೂ ಪಟ್ಟಣದ ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕು ಉತ್ತಮ ಆರ್ಥಿಕ ಪ್ರಗತಿ ಹೊಂದಿದೆ ಎಂದು ಬ್ಯಾಂಕಿನ ಸಂಸ್ಥಾಪಕ ಆದ್ಯಕ್ಷರಾದ ಕೆ.ಎಸ್. ನಾಗರಾಜರವರು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 100 ಕೋಟಿಗೂ ಹೆಚ್ಚು ವ್ಯವಹಾರ ನಡೆದಿದ್ದು, ರೂ 2.32 ಕೋಟಿಒಟ್ಟು ಲಾಭಗಳಿಸಿ, ತೆರಿಗೆಯ ನಂತರ ರೂ 1. 53 ಕೋಟಿ ನಿವ್ವಳ ಲಾಭಗಳಿಸಿದೆ. ಕರೋನಾ ಸಂಕಟದ ನಡುವೆಯೂ ಶೇ. 99.50 ರ ನಡುವೆ ಸಾಲ ವಸೂಲಾತಿಯಾಗಿದ್ದು ಬ್ಯಾಂಕಿನಗ್ರಾಹಕರಿಗೆ ಹಾಗೂ ಸದಸ್ಯರಿಗೆ ಅದ್ಯಕ್ಷರು ಅಭಿನಂದನೆಗಳನ್ನು ತಿಳಿಸಿದರು. ಈ ಸಾಲಿನಅಂತ್ಯಕ್ಕೆ ಠೇವಣಿಗಳು ರೂ 84.89 ಕೋಟಿ ಇದ್ದು ಸಾಲ ಮತ್ತು ಮುಂಗಡಗಳು ರೂ20.30 ಕೋಟಿಗಳು ಇರತ್ತದೆ ಹಾಗೂ ಸ್ವಂತ ಬಂಡವಾಳು ರೂ 11.13 ಕೋಟಿಗಳು ಇದೆ ಎಂದು ತಿಳಿಸಿದರು.
ಸಹಕಾರ ಕ್ಷೇತ್ರದ ಉನ್ನತವಾದ ಧ್ಯೇಯ ಹಾಗೂ ಮೌಲ್ಯಗಳ ಆಧಾರದ ಅಡಿಯಲ್ಲಿ ಬ್ಯಾಂಕಿನ ವ್ಯವಹಾರವನ್ನು ನಡೆಸುತ್ತಲಿದ್ದು,
ಸ್ಥಳೀಯ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವುದರ ಜೋತೆಗೆ ಸಾಮಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ
ನೆರವೇರಿಸುತ್ತಿದ್ದೇವೆ ಎಂದು ತಿಳಿಸಿದರುಗ್ರಾಹಕರಿಗೆ ಉತ್ತಮ ಹಾಗು ತ್ವರಿತ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಬ್ಯಾಂಕಿನ ಡಿಜಿಟೆಲ್ ಸೇವೆಗಳಾದ ಮೊಬೈಲ್ ಬ್ಯಾಂಕಿಂಗ್, ಐ.ಎಂ.ಪಿ.ಎಸ್. ಎ.ಟಿ.ಎಂ. ಪಿ.ಓ.ಎಸ್. ಈ ಕಾಮರ್ಸ್ ಬಿ.ಬಿ.ಪಿ.ಎಸ್. ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯಗಳ ಜೊತೆಗೆ ಯು.ಪಿ.ಐ. ಸೇವೆಯನ್ನು ನೀಡುತ್ತಲಿದೆ ಬ್ಯಾಂಕಿನ ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಎಂ.ಎಸ್. ರೇಣುಕಾ ಸರನಾಡ ಮಲ್ಲಿಕಾರ್ಜುನ ಗೌಡರು, ವ್ಯವಸ್ಥಾಪಕರಾದ ಕೆ. ಪ್ರಕಾಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.