ಕರೋನ ವಾರಿಯರ್ ಶಿಕ್ಷಕರಿಗೆ ರಕ್ಷಾ ಪರಿಕರಗಳ ವಿತರಣೆ

ಹೊಸಪೇಟೆ ಜೂ3: ಕರೋನಾ ಮಹಾಮಾರಿಯ ಈ ಸಂದರ್ಭದಲ್ಲಿ ವಿವಿಧ ಹಂತದಲ್ಲಿ ಕರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುವ ಶಿಕ್ಷಕ ಶಿಕ್ಷಕಿಯರಿಗೆ ವಿವಿಧ ಹಂತದ ಸಲಕರಣೆಗಳನ್ನು ನೀಡುವ ಮೂಲಕ ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘ ಬದ್ದತೆಯನ್ನು ಮೆರೆದಿದೆ.
ಹೊಸಪೇಟೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಸುಮಾರು 200 ಶಿಕ್ಷಕರಿಗೆ ಮಾಸ್ಕ್, ಕೈಗವಚ, ಸ್ಯಾನಿಟ್ಯಜರ್, ಹ್ಯಾ೦ಡ್ ವಾಸ್ ಗಳನ್ನು ವಿತರಿಸಲಾಯಿತು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದಿಂದ ವಿಜಯನಗರ ಜಿಲ್ಲೆ ಮತ್ತು ಹೊಸಪೇಟೆ ತಾಲೂಕಿನಲ್ಲಿ ಕರೋನಾ ವಾರಿಯರ್ಸ್ ಆಗಿನ ಮನೆ ಮನೆ ಸವೆ೯ ಮಾಡಿ ಅವರಿಗೆ ಮೇಡಿಸನ್ ಕೊಟ್ಟು ಬರುವಂತಹ ಗುರುಗಳು ಮತ್ತು ಗುರುಮಾತೆಯರಿಗೆ ಕೋವೀಡ್ ಕಿಟ್ ಸಂಘದ ವತಿಯಿಂದ ವಿತರಿಸಲಾತು.
ಕಾಯ೯ಕ್ಕೆ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸುನಂದಮ್ಮ ಅವರು ನಮಗೆ ಸಹಕಾರಿಯಾಗಿದ್ದಾರೆ ಹಾಗೂ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಈ ಕಾಯ೯ಕ್ಕೆ ಕೈ ಜೋಡಿಸಿದ್ದಾರೆ ಎಂದು ಸಂಘದ ಅಧ್ಯಕ್ಷೆ ಉಮಾದೇವಿ ತಿಳಿಸಿದರು.
ಈ ಸಂದರ್ಭದಲ್ಲಿ ಸ೦ಘ ರೂಪಾ ಡಿ. ಟಿಕಾರೆ, ರಶ್ಮಿ, ಅರುಂದತಿ, ಹನುಮತ್ವ ಉಷಾರಾಣಿ ಸೇರಿದಂತೆ ಇತರರು ಹಾಜರಿದ್ದರು.