ಕರೋನ ವಾರಿಯರ್ಸ್‍ಗಳಿಗೆ ವಿಮೆ ಬಾಂಡ್ ವಿತರಣೆ

ನಂಜನಗೂಡು.ನ.9- ಈ ಕ್ಷೇತ್ರದಲ್ಲಿ ಧ್ರುವನಾರಾಯಣ ಮತ್ತು ಕೇಶವಮೂರ್ತಿ ಹಾಗೂ ಮಾಜಿ ಸಚಿವ ಡಾ.ಮಾದೇವಪ್ಪ ಬಣ , ಇಲ್ಲ ಇಲ್ಲಿ ಇರುವುದು ಕಾಂಗ್ರೆಸ್ ಬಣ ಮಾತ್ರ ಎಂದು ಮಾಜಿ ಸಂಸದ ಧ್ರುವನಾರಾಯಣ್ ತಿಳಿಸಿದರು.
ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಕೆಪಿಸಿಸಿ ಆರೋಗ್ಯ ಹಸ್ತ ಕವಚ ವಿಮೆ ಬಾಂಡ್ ವಿತರಣೆ ಕಾರ್ಯಕ್ರಮವನ್ನು ಮಾಜಿ ಸಂಸದ ಧ್ರುವನಾರಾಯಣ್ ಉದ್ಘಾಟಿಸಿ ಮಾತನಾಡುತ್ತಾ ಕೆಪಿಸಿಸಿ ಸೂಚನೆಯಂತೆ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕರೋನ ವಾರಿಯರ್ಸ್ ಗಳಿಗೆ ಆರೋಗ್ಯ ಹಸ್ತ ವಿಮೆಯ ಬಾಂಡ್ ವಿತರಣೆ ಮಾಡಿಕೊಡಬೇಕೆಂದು ಸೂಚನೆ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅದರಂತೆ ಕರೋನ ವಾರಿಯರ್ಸ್ ಗಳಿಗೆ ತಮಿಳ್ ಮಾಡುವಾಗ ಕೆಲಸ ಬಾಂಡ್ ವಿತರಣೆ ಮಾಡಲಾಗುತ್ತಿದೆ ಎಂದರು ಮಾಜಿ ಸಂಸದ ಧ್ರುವನಾರಾಯಣ್ ಮಾಜಿ ಶಾಸಕ ಕೇಶವಮೂರ್ತಿ ಕೆಪಿಸಿಸಿ ಮುಖಂಡ ಶಂಕರ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ವಿತರಿಸಿದರು.
ಕೆಪಿಸಿಸಿ ಮುಖಂಡ ಶಂಕರ್ ಮಾತನಾಡಿ ಕೊರೋನಾ ವೈರಸ್ ಬಗ್ಗೆ ಆಡಳಿತ ಪಕ್ಷ ನಿರ್ಲಕ್ಷ್ಯ ತೋರಿದೆ ಆಸಮಯದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಉತ್ತಮ ಕೆಲಸ ಮಾಡಿದ್ದೇವೆ ಪ್ರತಿಯೊಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ.
ಈ ಸಮಯದಲ್ಲಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದೆ ನಮ್ಮ ಮುಂದಿನ ಚುನಾವಣೆಗೆ ದಾರಿಯಾಗಿದೆ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಬಂದಿದೆ ಮುಂದೆ ಬರುವ ಚುನಾವಣೆಗಳನ್ನು ಧೈರ್ಯವಾಗಿ ಹೆದರಿಸಿ ಅಧಿಕಾರ ಹಿಡಿಯಲು ಎಲ್ಲಾ ಕಾರ್ಯಕರ್ತರು ಒಮ್ಮತವಾಗಿ ದುಡಿಯಬೇಕು ಎಂದರು ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಶಂಕರ್ ಪಕ್ಷದ ಮುಖಂಡರನ್ನು ಸ್ವಾಗತಿಸಿದರು
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮುಖಂಡ ಶಂಕರ್ ಜಿಲ್ಲಾಧ್ಯಕ್ಷರ ವಿಜಯ್ಕುಮಾರ್ ಎಲ್ಲ ಬ್ಲಾಕ್ ಅಧ್ಯಕ್ಷರುಗಳು ಎಲ್ಲಾ ನಗರಸಭೆ ಸದಸ್ಯರುಗಳು ಪಕ್ಷದ ಎಲ್ಲಾ ಮಾಜಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರುಗಳು ಮುಖಂಡರುಗಳು ಹಾಜರಿದ್ದರು.