ಕರೋನ ಮುಕ್ತ ಯುಗಾದಿ ಕಾರ್ಯಕ್ರಮ ಆಚರಣೆ

ಚಾಮರಾಜನಗರ, ಏ.17-ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶನದಲ್ಲಿ ಕರೋನಮುಕ್ತ ಯುಗಾದಿ 21 ವಿಶೇಷ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮುಖ್ಯ ಸಂಚಾಲಕಿ ರಾಜಯೋಗ ಶಿಕ್ಷಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಅವರು ವರ್ತಮಾನ ಸಮಯದ ಮನುಷ್ಯನ ಬದುಕು ಚಾಲೆಂಜಿಂಗ್ ಬದುಕಾಗಿದೆ. ಕರೋನಾ ವೈರಸ್‍ಗೆ ಮುಕ್ತಿ ಹಾಡಬೇಕಾಗಿದೆ.ಜೀವನದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು
ಮನುಷ್ಯನ ಜೀವನ ಪ್ರಯಾಣ ವಿದ್ದಂತೆ ಪ್ರಯಾಣದಲ್ಲಿ ಅನೇಕ ಸಿಹಿ ಕಹಿ ಘಟನೆಗಳು ದೃಶ್ಯರೂಪದಲ್ಲಿ ಕಂಡುಬರುತ್ತವೆ. ಇದನ್ನು ಸಮಾನವಾಗಿ ಸ್ವೀಕರಿಸುವುದೇ ಸತ್ಯ ಯುಗಾದಿ ಎಂದು ಅಭಿಪ್ರಾಯಪಟ್ಟರು.
ಸೃಷ್ಟಿ ಚಕ್ರದ 5 ಯುಗಗಳಾದ ಸತ್ಯಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗ ಸಂಗಮಯುಗಳಲ್ಲಿ ಸರ್ವಶ್ರೇಷ್ಠ ಯುಗ ಸಂಗಮಯುಗವಾಗಿರುತ್ತದೆ. ಸಂಗಮ ಯುಗವು ಆತ್ಮ-ಪರಮಾತ್ಮನನ್ನು ಮಿಲನ ಮಾಡುವ ಯುಗವಾಗಿದೆ. ನರಕ ಸದೃಶವಾಗಿರುವ ಕಲಿ ಯುಗವನ್ನು ಪರಿವರ್ತಿಸಿ ಸತ್ಯಯುಗ ದೇವಿ ದೇವತೆಗಳ ಸುವರ್ಣಯುಗ ವನ್ನಾಗಿ ಪರಿವರ್ತಿಸುವ ವರ್ತಮಾನ ಕಲ್ಯಾಣಕಾರಿ ಪುರುμÉೂೀತ್ತಮ ಸಂಗಮ ಯುಗವಾಗಿದೆ. ಸಂಗಮೇಶ್ವರ ಪರಮಾತ್ಮನು ಬ್ರಹ್ಮನ ತನುವಿನಲ್ಲಿ ಅವತರಿಸಿ ಕತ್ತಲಾಗಿರುವ ಜಗತ್ತನ್ನು ಬೆಳಕನ್ನಾಗೀ ಮಾಡಿದ ಯುಗವಾದ ಸಂಗಮ ಯುಗದ ಸ್ಮಾರಕವಾಗಿ ಇಂದು ನಾವು ಖುಷಿ, ನಶೆ, ಉಮಂಗ, ಉತ್ಸಾಹ ಸಡಗರ ಸಂಭ್ರಮದಿಂದ ನಕ್ಕು ನಲಿದು ಯುಗಾದಿಯನ್ನಾಗಿ ಆಚರಿಸುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಸಿಹಿ-ಕಹಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸುತ್ತಾ ಸತ್ಯಯುಗ ತ್ರೇತಾಯುಗಗಳಲ್ಲಿ ಸುಖದಲ್ಲಿ ಭಾಗಿಯಾಗಿದ್ದೆವು. ದ್ವಾಪರ ಕಲಿಯುಗದಲ್ಲಿ ಮಾಯೆಯ ಅವಗುಣಗಳಿಗೆ ವಶೀಭೂತರಾಗಿ ದುಃಖದಲ್ಲಿ ಭಾಗಿಯಾಗಿ ಕಹಿಯಾದಂತಹ ಜೀವನ ನಡೆಸುತ್ತಿದ್ದೇವೆ ಎಂದು ವಿμÁದ ವ್ಯಕ್ತಪಡಿಸಿದ ಅವರು, ಸೃಷ್ಟಿನಾಟಕವು ಸುಖ-ದುಃಖ ಸಿಹಿ-ಕಹಿ ಸೋಲು-ಗೆಲುವು ನಿಂದಾಸ್ತುತಿ ಏಳುಬೀಳು ಉತ್ತಾನ ಪತನದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವೀಸ್ನ ಬಿಕೆ ಆರಾಧ್ಯ ಲಕ್ಷ್ಮಮ್ಮ ಸುಕನ್ಯಾ ಪ್ರಭಾಕರ್ ನಟರಾಜ್ ಶಿವಕುಮಾರ್ ಪುಟ್ಟಶೇಖರಮೂರ್ತಿ ಶ್ರೀನಿವಾಸ ರಾಜೇಶ್ ಗೀತಾ ಮುಂತಾದವರು ಹಾಜರಿದ್ದರು.