ಕರೋನಾ ಹಿನ್ನಲೆ ಬಳ್ಳಾರಿ ಎಪಿಎಂಸಿ ತರಕಾರಿ ಮಾರುಕಟ್ಟೆ ಬಂದ್ 7ಕಡೆ ತಾತ್ಕಾಲಿಕ ವ್ಯವಸ್ಥೆ

ಬಳ್ಳಾರಿ, ಏ.21: ಕೋವಿಡ್ 2ನೇ ಅಲೆಯ ಸೊಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣಗೊಳಿಸಲು ಹಾಗೂ ಸಾರ್ವಜನಿಕ ದಟ್ಟಣೆ ನಿಯಂತ್ರಿಸಿ, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಳ್ಳಾರಿಯ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಮತ್ತು ಹಣ್ಣುಗಳನ್ನು ವ್ಯಾಪಾರ ಬಂದ್ ಮಾಡಿ

ಅಲ್ಲಿನ ವ್ಯಾಪಾರಿಗಳನ್ನು ನಗರದ ವಿವಿಧ ಭಾಗಗಳಿಗೆ ವಿಕೇಂದ್ರಿಕರಿಸಿ ಈ ವಿವಿಧ ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ವ್ಯಾಪಾರ ನಡೆಸುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.

ಮೊದಲನೇ ಕರೋನಾ ಸಂದರ್ಭದಲ್ಲಿ ಮಾಡಿದಂತೆ
ನಗರದ ಈದ್ಗಾ ಮೈದಾನ,ಐ.ಟಿ.ಐ. ಕಾಲೇಜು ಮೈದಾನ, ರೆಡಿಯೋ ಪಾರ್ಕ್, ಎನ್.ಸಿ.ಸಿ ಮೈದಾನ ಕಂಟೋನ್ಮೆಂಟ್, ಸೆಂಟ್‌ಜಾನ್ಸ್ ಶಾಲೆಯ ಮೈದಾನ, ಕಪಗಲ್ಲು ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮೈದಾನ, ಜಿಲ್ಲಾ ಕ್ರೀಡಾಂಗಣ, ಶ್ರೀರಾಂಪುರ ಕಾಲೋನಿಯಲ್ಲಿ ಸರ್ಕಾರಿ ಶಾಲೆ ಹತ್ತಿರ ತಾತ್ಕಾಲಿಕ ವ್ಯವಸ್ಥೆ ಮಾಡಿದೆ.