ಕರೋನಾ ಹರಡಲು ಸರಕಾರದ ತಾರತಮ್ಯ ನೀತಿಗಳೇ ಕಾರಣ

ಆಲಮೇಲ :ಎ.17:ನಮಸ್ತೆ ಟ್ರಂಪ್ ದಿಂದ ಹಿಡಿದು ಕುಂಭಮೇಳದಲ್ಲಿ ಲಕ್ಷ ಲಕ್ಷಗಟ್ಟಲೆ ಜನ ಸೇರಿಸಿ ಭಾರತದಲ್ಲಿ ಕರೋನಾ ಎಂಬ ಮಹಾಮಾರಿ ರೋಗ ದೇಶದಾದ್ಯಂತ ಹರಡಿರುವುದು ಕೇಂದ್ರ ಸರಕಾರವೇ ನೇರ ಕಾರಣ. ರಾಜಕೀಯ ಪಕ್ಷಗಳು ಸಾವಿರಾರು ಜನ ಸೇರಿ ಕಾರ್ಯಕ್ರಮ ಮಾಡಲು ಅನುಮತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರಕಾರ ಅಲ್ಲಿ ಯಾವುದೇ ಕರೋನಾ ರೋಗ ಹರಡುದಿಲ್ಲ ಅನಿಸುತ್ತದೆ.
ವರ್ಷಕ್ಕೆ ಒಮ್ಮೆ ಬರುವ ಮುಸ್ಲಿಮರ ರಂಜಾನ ಮಾಸ ಬಂದ ಕೋಡಲೇ ಕೇಂದ್ರ ಮತ್ತು ರಾಜ್ಯ ಸರಕಾರ ಕರೋನಾ ಮಾರ್ಗಸೂಚಿ ಬಿಡುಗಡೆ ಮಾಡಿರುವುದು ನೋಡಿದರೆ ದೇಶದಲ್ಲಿ ಹಿಟ್ಲರ್ ಸರಕಾರ ಕೋಮವಾದಿ ನೀತಿ ಅನುಸರಿಸುತ್ತರುವುದು ಖಂಡನೀಯ, ಇದರಿಂದ ದೇಶದಲ್ಲಿನ 30 ಕೋಟಿ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿರುವ ಸರಕಾರಕ್ಕೆ ಅಧಿಕಾರದಲ್ಲಿ ಇರಲು ಯಾವುದೇ ನೈತಿಕತೆ ಇಲ್ಲಾ ಕೊಡಲೇ ರಾಜೀನಾಮೆ ನೀಡಿ ಆ ಹಿಂದಿನ ಸೌಹಾರ್ದತೆಯ ದಿನಗಳು ನಮಗೆ ಬಿಟ್ಟು ಕೊಡಿ, ಇಲ್ಲಾ ನಾವೂ ಕಸೆದುಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ನಜೀರ ಆಲಗೂರ ಯುವ ಕಾಂಗ್ರೇಸ್ ಅಧ್ಯಕ್ಷ ಆಲಮೇಲ ತಿಳಿಸಿದ್ದಾರೆ.