ಕರೋನಾ ಸಮರಕ್ಕೆ ಜನರ ಸಹಕಾರ ಅಗತ್ಯ

ಹಿರಿಯೂರು:ಮೇ.28; ತಾಲ್ಲೂಕಿನಲ್ಲಿ ಕರೋನಾ ರೋಗಕ್ಕೆ ತಡೆಯೊಡ್ಡಲು ಜನರ ಸಹಕಾರವು ಅಮೂಲ್ಯ ಎಂದು ಶಾಸಕಿ ಕೆ ಪೂರ್ಣಿಮ ಶ್ರೀನಿವಾಸ್ ಹೇಳಿದರು ಅವರು ಆದಿವಾಲ ಗ್ರಾಮದ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಮಾಸ್ಕ್ ಗಳನ್ನ ವಿತರಿಸಿ ಮಾತನಾಡಿದರು , ನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವೆಡೆ ಆಕ್ಸಿಜನ್ ಸಹಿತದ ಸರ್ಕಾರಿ ಐಸೋಲೇಷನ್ ಸೆಂಟರ್ ಗಳನ್ನ ತೆರೆಯಲಾಗಿದೆ ಕರೋನಾ ಬಾದಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ ಆರೈಕೆ  ಮಾಡಲು ತಾಲ್ಲೂಕು ಆಡಳಿತ  ಶ್ರಮಿಸುತ್ತಿದೆ ಜನ ಊಹಪೋಹಗಳಿಗೆ ಕಿವಿಗೊಡದೆ ಆಡಳಿತದೊಂದಿಗೆ ಸಹಕರಿಸಿ ಎಂದರು.ಮನೆ ಮನೆ ಸಮಿಕ್ಷೆಯ ಮೂಲಕ ರೋಗ ಲಕ್ಷಣಗಳಾದ ಕೆಮ್ಮು ನೆಗಡಿ ಜ್ವರ ಇರುವುದನ್ನು  ಗುರುತಿಸಲಾಗಿರುವವರಿಗೆ ಪ್ರಾಥಮಿಕ ಹಂತದಲ್ಲಿ ಸೇವಿಸಲು ಸರ್ಕಾರ ಮಾತ್ರೆಗಳನ್ನ ವಿತರಿಸುತ್ತಿದ್ದು , ಸಮೀಕ್ಷೆಯ ಮೂಲಕ ಗುರುತಿಸಿರುವವರಿಗೆ ಮಾತ್ರೆಗಳನ್ನ ವಿತರಿಸಲಾಯಿತು. ಯಾದವ ಸಮಾಜದ ರಾಜ್ಯಾಧ್ಯಕ್ಷ ರಾದಡಿ ಟಿ ಶ್ರೀನಿವಾಸ್ ಮಾತನಾಡಿ ಅಂಗನಾಡಿ ಆಶಾ ಆರೋಗ್ಯ ಇಲಾಖೆ ಸಿಬ್ಬಂದಿಗಳ ಶ್ರಮ ಮಹತ್ವಪೂರ್ಣವಾಗಿದ್ದು ಕರೋನಾ ವಿರುದ್ದದ ಸಮರಕ್ಕೆ ಮುಂಚೂಣಿಯಾಗಿ ನಿಂತು ನಿಖರವಾದ ಅಂಕಿ ಅಂಶಗಳನ್ನ ನೀಡಿ ಜನಜಾಗ್ರುತಿಯನ್ನ ಕೈಗೊಂಡಿರುವುದು ಹೆಮ್ಮೆಯ ವಿಚಾರ ಎಂದರು . ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ್, ಟಿಎಚ್ ಓ ಡಾ: ಟಿ ವೆಂಕಟೇಶ್, ಇಓ ಈಶ್ವರ್ ಪ್ರಸಾದ್ ,ಡಿವೈಎಸ್ಪಿ  ಸೈಯದ್ ರೋಷನ್ ಜಮೀರ್, ಸಿಪಿಐ ಕೆ.ಆರ್ ರಾಘವೇಂದ್ರ ಪಿಡಿಓ ಶ್ರೀನಿವಾಸ್, ಕಾರ್ಯದರ್ಶಿ ನಾಗೇಂದ್ರಪ್ಪ  ಸಿಬ್ಬಂದಿ ಫೈರೋಜ್  ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್ ,ಸಾಕಮ್ಮ, ಮುನೀರ್, ಸುಭಾನ್ ಖಾನ್, ನಾಸೀರಾ, ಅನ್ನಪೂರ್ಣ , ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ಮತ್ತಿತರರು ಭಾಗವಹಿಸಿದ್ದರು.