ಕರೋನಾ ಸಂದರ್ಭದಲ್ಲಿ ರೈತರ ಬದುಕು ಅತಂತ್ರಃ ನಿಂಗರಾಜ ಆಳೂರ

ವಿಜಯಪುರ, ಸೆ.15-ಕರೋನಾ ಸಂದರ್ಭದಲ್ಲಿ ರೈತರ ಬದುಕು ಅತಂತ್ರವಾಗಿದ್ದು, ಸರಕಾರ ರೈತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ನಿಂಗರಾಜ ಆಳೂರ ಆಗ್ರಹಿಸಿದರು.
ನಗರದ ಶಿಕಾರಖಾನೆಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಿಶ್ವ ಲಿಂಗಾಯತ ಪಂಚಮಸಾಲಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕರೋನಾ ಮತ್ತು ರೈತರ ಸ್ಥಿತಿ ಗತಿ ಕುರಿತು ವಿಚಾರ ಸಂಕಿರಣದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು. ದೇಶದ ಬೆನ್ನೆಲುಬಾದ ರೈತನು ಇಂದು ದಯನೀಯ ಸ್ಥಿತಿಯಲ್ಲಿದ್ದು ಯುವ ಜನಾಂಗ ಕೃಷಿ ಕಾರ್ಯಗಳತ್ತ ಮುಖ ಮಾಡದೆ ಇರುವದು ವಿಷಾದಿಸಿ ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡು ವಾಣಿಜ್ಯ ಬೆಳೆ ಬೆಳೆದು ರೈತರು ಬದುಕನ್ನು ಹಸನಗೊಳಿಸಿಕೊಳ್ಳಲು ರೈತರಿಗೆ ಸರಕಾರ ಸೂಕ್ತ ನೆರವು ಯೋಜನೆಗಳನ್ನು ಕಲ್ಪಿಸಲಿ ಎಂದರು.
ನ್ಯಾಯವಾದಿ ದಾನೇಶ ಅವಟಿ ಮಾತನಾಡಿ ಕೃಷಿ ಪ್ರಧಾನ ನಮ್ಮ ದೇಶ. ವಿವಿಧ ಬೆಳೆಗೆ ಹೆಸರುವಾಸಿ, ನಮ್ಮ ದೇಶಕ್ಕೆ ಬೇರೆ ರಾಷ್ಟ್ರಗಳಿಂದ ಆಹಾರ ಮತ್ತು ಸಾಂಬಾರು ಪದಾರ್ಥಕ್ಕೆ ವಿದೇಶಿಗರು ಮರುಳಾಗಿ ಬಂದರು. ಎಂಬ ಇತಿಹಾಸವಿದೆ. ನಗರೀಕರಣ ತಾಂತ್ರಿಕತೆ ಕಾರ್ಖಾನೆಗಳಿಂದ ಹೊಸ ಶೈಲಿಯಿಂದ ಕೃಷಿ ಭೂಮಿ ಬಂಜರು ಆಗುತ್ತಿವೆ. ನಮ್ಮ ಭೂಮಿ ನಮ್ಮ ಬೇಸಾಯ ಪದ್ದತಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಅಧ್ಯಕ್ಷ ಗವಿಸಿದ್ದ ಅವಟಿ ಮಾತನಾಡಿ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಹೆಚ್ಚು ಬದಲಿಷ್ಟವಾಗಿದ್ದು ಕೃಷಿ ಹಾಗೂ ಬೇಸಾಯವನ್ನು ಅವಲಂಭಿಸಿದ್ದಾರೆ. ಇಂದಿನ ಕರೋನಾ ಸಂದರ್ಭದಲ್ಲಿ ಅವರ ಬದುಕು ಅತಂತ್ರವಾಗಿದೆ. ಕಾರಣ ರೈತರು ದೃತಿಗೆಡದೆ ಈ ಮಳೆಗಾಲದ ಸಂದರ್ಭದಲ್ಲಿ ಕೃಷಿ ಹಾಗೂ ಬೇಸಾಯವನ್ನು ಮುಂದುವರಿಸಬೇಕು. ಸರಕಾರದ ವಿವಿಧ ಯೋಜನೆ ಪಡೆಯಲು ಮುಂದಾಗಬೇಕು. ಬ್ಯಾಂಕು, ಇಲಾಖೆ ಮತ್ತಿತರ ಕಡೆಯಿಂದ ವಿವಿಧ ಯೋಜನೆಗಳಿಗಾಗಿ ಸವಲತ್ತುಗಳನ್ನು ಪಡೆದು ಬದುಕು ಹಸನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ್ ಅವರ ತಾಯಿ ಶ್ರೀಮತಿ ಪಾರ್ವತಿಬಾಯಿ ಶಂಕ್ರೆಪ್ಪ ಪಾಟೀಲ್ ಅವರ ನಿಧನಕ್ಕೆ ಸಭೆಯಲ್ಲಿ ಶೋಕ ವ್ಯಕ್ತಪಡಿಸಿ ಮೌನ ಆಚರಿಸಿ ಶೃದ್ದಾಂಜಲಿ ಸಮರ್ಪಿಸಲಾಯಿತು.
ಕಲ್ಲಪ್ಪ ಅಡಿಹುಡಿ, ವಿಜಯಕುಮಾರ ಜಾಬಾ, ಬಸವರಾಜ ಕೊನಳ್ಳಿ (ಬಸವನಗರ) ಮಂಜುನಾಥ ನಿಡೋಣಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶ್ರೀಮತಿ ಬಸಮ್ಮ ಗುಜರಿ (ಜಾಬಾ) ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ಪಾಗಾದÀ, ಅಂಜನಾ ಪಾಟೀಲ್ ಪ್ರಾರ್ಥಿಸಿದರು. ನಿಂಗಪ್ಪ ಸಂಗಾಪೂರ ನಿರೂಪಿಸಿದರು. ಜಗದೀಶ ಬಳೂತಿ ವಂದಿಸಿದರು.