“ಕರೋನಾ ವ್ಯಾಕ್ಸಿನ್” ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದಲ್ಲಿ ಸುವ್ಯವಸ್ಥೆ

ಹೊಸಪೇಟೆ ಏ30: ಹೊಸಪೇಟೆಯ ವಿವಿಧಡೆಗಳಲ್ಲಿ ಸರ್ಕಾರ ಉಚಿತ ವ್ಯಾಕ್ಸಿನ್ ನೀಡುವ ಕಾರ್ಯ ಮಾಡುತ್ತಿದ್ದು ವೀರಶೈವ ಸಮಾಜದ ಸಹಯೋಗದಲ್ಲಿ ನಗರದ ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರದಲ್ಲಿಯು ಉಚಿತ ವ್ಯಾಕ್ಸಿನ್ ನೀಡಲಾಗುತ್ತಿದೆ.
ಕಳೆದ ಮೂರುದಿನಗಳಿಂದಲೂ ಸಮಾಜದ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ನಿತ್ಯವೂ 300 ಜನರಿಗೆ ವ್ಯಾಕ್ಸಿನ್ ನೀಡುತ್ತಿದ್ದು, ವಿಶಾಲ ಪ್ರಾಂಗಣದಲ್ಲಿ ನೊಂದಣಿ, ಮಾಹಿತಿ ದಾಖಲಾತಿ, ಸಾಮಾಜಿಕ ಅಂತರದೊಂದಿಗೆ ಕುಳಿತುಕೊಳ್ಳಲು ಅವಕಾಶ ಸೇರಿದಂತೆ ಪರಿಣಿತರಿಂದ ವ್ಯಾಕ್ಸಿನೇಷನ್‍ಗೆ ವ್ಯವಸ್ಥೆಮಾಡಿದ್ದು ಬಹುತೇಕ ಹಿರಿಯನಾಗರಿಕರು ಪ್ರಯೋಜನ ಪಡೆಯುತ್ತಿದ್ದಾರೆ.
ಇಲಾಖೆ ಇದೆ ರೀತಿಯ ಸಹಕಾರ ನೀಡಿದರೆ ನಾನು ನಿರಂತರವಾಗಿ ವ್ಯಾಕ್ಸಿನೇಷನ್ ಪ್ರಕ್ರೀಯೆ ನಡೆಯಲು ಸಹಕಾರ ನೀಡುವುದಾಗಿ ವೀರಶೈವ ಸಮಾಜದ ಅಧ್ಯಕ್ಷ ಶರಣಸ್ವಾಮಿ ಹೇಳಿದರು. ರವಿಶಂಕರ, ಸಾಲಿ ಸಿದ್ದಯ್ಯಸ್ವಾಮಿ ಸೇರಿದಂತೆ ಅನೇಕ ಹಿರಿಯರು ಸಮಾಜ ಭಾಂದವರು ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು ವಿಶೇಷವಾಗಿದೆ.