ಕರೋನಾ ವಾರಿಯರ್ಸ ಸೇವೆ ಶ್ಲಾಘನೀಯ

ಆಲಮೇಲ :ಮೇ.18:ಇಡೀ ಜಗತ್ತನ್ನು ಬೆಚ್ಚಿಬೀಳಿಸಿ ಹೆಮ್ಮಾರಿ ಕರೋನಾ ಇನ್ನೇನು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಅದರ ರೂಪಾಂತರಿ ವೈರಸ್ ಎರಡನೇ ಅಲೆ ಇಡೀ ಜಗತ್ತು ತನ್ನ ಕಪಿಮುಷ್ಠಿಗೆ ತೆÀಗೆದುಕೊಂಡು ಮರಣ ಮೃದಂಗ ಬಾರಿಸುತ್ತಿದ್ದೆ ನಾವು ಎಲ್ಲರೂ ಮನೆಯಲ್ಲಿ ಆರಾಮವಾಗಿ ಇದ್ದೇವೆ ಆದರೆ ನಮ್ಮ ಕರೋನಾ ಯೋಧರಾದ ವೈದ್ಯರು,ಪೊಲೀಸ್,ಪೌರಕಾರ್ಮಿಕ ಮಾತ್ರ ಹಗಲು ರಾತ್ರಿ ಎನ್ನದೆ ನಮಗಾಗು ಶ್ರಮಿಸುತ್ತಿದ್ದಾರೆ ಇವರ ಈ ಸೇವೆ ಶ್ಲಾಘನೀಯವಾದದ್ದು ಎಂದು ಅಸಂಘಟಿತ ಕಾರ್ಮಿಕ ವಲಯ ಉಪಾಧ್ಯಕ್ಷ ಸೈಪನ ಡಾಂಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕರೋನಾ ಹೆಮ್ಮಾರಿ ಗ್ರಾಮೀಣ ಪ್ರದೇಶಗಳಲ್ಲಿ ದಾಂಗುಡಿ ಇಟ್ಟಿದ್ದೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ಮಾಡುವ ಕೆಲಸವಾದಬೇಕು ಪಟ್ಟಣ ಪ್ರದೇಶದಲ್ಲಿ ಹೆಚ್ಚಿನ ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಕರೋನಾ ಹೆಚ್ಚಾದರೂ ಅದನ್ನು ನಿಯಂತ್ರಣಕ್ಕೆ ತರುವ ಕಷ್ಟಕರವಾಗಿದೆ ಆದಷ್ಟೂ ಬೇಗ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದಲ್ಲಿ ಸಮರೋಪಾದಿಯಲ್ಲಿ ಕಾರ್ಯ ಮುಂದುವರಿಯಲಿ ಎಂದು ತಿಳಿಸಿದ್ದಾರೆ