ಕರೋನಾ ವಾರಿಯರ್ಸಗಳ ಕಾರ್ಯ ಶ್ಲ್ಯಾಘನೀಯ ಯಲಿಗಾರ


ಶಿಗ್ಗಾವಿ,ಜ.5:ಸಿ.ಬಿ.ಯಲಿಗಾರ ಸೇವಾ ಸಂಸ್ಥೆ (ರಿ) ಗಂಗೀಭಾವಿ ಪ್ರಥಮ ವರ್ಷದ ಸ್ಮರಣೋತ್ಸವ ಸಮಾರಂಭದ ಉದ್ಘಾಟನೆಯನ್ನು ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕಿನ ಪುಣ್ಯ ಕ್ಷೇತ್ರ ಗಂಗೀಭಾವಿಯ ಸಮಾಜ ಸೇವಕ ಶಶೀಧರ ಯಲಿಗಾರ ಹೋಂ ಸ್ಟೇ ನಲ್ಲಿ ನೆಡೆದ ದಿವಂಗತ ಚನ್ನಬಸಪ್ಪ ಬಸವಣ್ಣೆಪ್ಪ ಯಲಿಗಾರ ಸ್ಮರಣೋತ್ಸವ ನಿಮಿತ್ಯ ಕೊರೋನಾ ವಾರಿಯರ್ಸಗೆ ಹಾಗೂ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಹೆಚ್ಚು ಅಂಕ ಗಳಿಸಿದ ನೂರು ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಶ್ರೀ.ಷ.ಬ್ರ. ರೇವಣಸಿದ್ದೇಶ್ವರ ಶಿವಾರ್ಚಾಯ ಮಹಾಸ್ವಾಮಿಗಳು ಅರಳೇ ಹಿರೇಮಠ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ, ನಾನೂ ಕೂಡಾ ಕೊರೋನಾ ಸೋಂಕಿಗೆ ಒಳಗಾಗಿ ಕರೋನಾ ವಾರಿಯರ್ಸಗಳ ಕಷ್ಟವನ್ನು ಕಂಡಿದ್ದೇನೆ ವೈದ್ಯರು, ಶುಶ್ರೂಕ್ಷಕರು, ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸೇರಿದಂತೆ ಅನೇಕ ಇಲಾಖೆಗಳ ಸಿಬ್ಬಂದಿಗಳು ಅವರು ಜೀವದ ಹಂಗು ತೊರೆದು ಇತರರಿಗೆ ಸೇವೆ ನೀಡಿ ಪ್ರಾಣ ಕಾಪಾಡಿದ್ದಾರೆ ಅವರ ಸೇವೆ ದೊಡ್ಡದು ಅವರಿಗೆ ನಾವು ಮಾಡುತ್ತಿರುವ ಸನ್ಮಾನ ಅಳಿಲು ಸೇವೆಯಷ್ಟೆ ಎಂದರು.
ಕರೋನಾ ಸಂದರ್ಭದಲ್ಲಿ ಮುದ್ರಣ ಹಾಗೂ ಇಲೆಕ್ಟಾನಿಕ ಮಾಧ್ಯಮದ ವರದಿಗಾರರು ಜನರಿಗೆ ಎಚ್ಚರಿಕೆ ನೀಡುತ್ತ ಕ್ಷಣಕ್ಷಣದ ಸುದ್ದಿಗಳನ್ನು ನೀಡುತ್ತ ಜನಜಾಗೃತಿ ಕಾರ್ಯ ಮಾಡಿದ್ದೂ ಅವರ ಸೇವೆ ಕೂಡಾ ತುಂಬಾ ಮಹತ್ವದ್ದಾಗಿದೆ. ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಖ ಗಳಿಸಿದ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡಬೇಕು ಎಂಬ ನನ್ನ ಬಹು ದಿನದ ಆಸೆ ನಾನೂ ಕೂಡಾ ಕನ್ನಡ ಮಾದ್ಯಮದಲ್ಲಿ ಕಲಿತಿದ್ದೇನೆ ಹಾಗಾಗಿ ಇವರೆಲ್ಲರಿಗೆ ಸನ್ಮಾನಿಸಿ ಅಭಿನಂದಿಸಬೇಕು ಎಂದು ಸಂಕಲ್ಪ ಮಾಡಿದ್ದೆ, ಅದು ನನ್ಮಿಂದ ಆಗುತ್ತದೆ ಇಲ್ಲವೋ ಎಂದು ಅದೈರ್ಯದಿಂದ ಇದ್ದೇ ಆಗ ನನ್ನ ಪತ್ನಿ ಸುನೀತಾ ಯಲಿಗಾರ ಹಾಗೂ ಮಾದ್ಯಮದ ಬಸವರಾಜ ಕುರಗೋಡಿ ಹಾಗೂ ಅವರ ತಂಡದ ಸದಸ್ಯರ ಸತತ ಪರಿಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು ಎಂದರು..
ಈ ಕಾರ್ಯಕ್ರಮ ಮಾಡಲು ನನಗೆ ಪ್ರೇರಣೆ ನನ್ನ ತಂದೆ ಮತ್ತು ತಾಯಿ ಕಾರಣ ಏಕೆಂದರೆ ನನ್ನ ತಂದೆ ಧಾರವಾಡದಲ್ಲಿ ಎಲ್ಲ ವರ್ಗದ ಜನರಿಗೆ ಸೂರು ನೀಡಿ ಹೆಸರುವಾಸಿಯಾದವರು, ಆಕಸ್ಮಿಕ ಅವರು ಗಂಗೀಭಾವಿ ಬೇಟಿ ನೀಡಿದಾಗ ಪುಣ್ಯ ಕ್ಷೇತ್ರ ಇಲ್ಲಿ ಪ್ರವಾಸೋದ್ಯಮ ತಾಣಗಳನ್ನು ಮಾಡು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಪಬ್ಲಿಕ ಪ್ರಾಸಿಕ್ಯೂಟರ ಎಸ್.ವ್ಹಿ.ಪಾಟೀಲ, ತಾಲೂಕ ಆರೋಗ್ಯಾಧಿಕಾರಿ ಡಾ|| ಹನುಮಂತಪ್ಪ ಕುಡಚಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮುಖ್ಯಅತಿಥಿಯಾಗಿ ಜಿಲ್ಲಾ ಆ.ಕು.ಕ. ಅಧಿಕಾರಿ ಡಾ|| ರಾಜೇಂದ್ರ ದೊಡ್ಡಮನಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮಠದ, ಗಂಗೀಭಾವಿ ಕಮಾಡೆಂಟ ಸುಂದರರಾಜ, ಮುಖ್ಯ ಅತಿಥಿಗಳಾಗಿ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಾಲೂಕ ದಂಡಾಧಿಕಾರಿ ಪ್ರಕಾಶ ಕುದರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ, ಶಿಗ್ಗಾವಿ ಡಿ.ವೈ.ಎಸ್.ಪಿ ಓ.ಬಿ.ಕಲ್ಲೇಶಪ್ಪ. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ , ಅನ್ನಪೂರ್ಣ ಚ.ಯಲಿಗಾರ, ಉದಯರವಿ.ಚ.ಯಲಿಗಾರ, ನಾಗರಾಜ ಚ.ಯಲಿಗಾರ, ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಕಾರ್ಯದರ್ಶಿ ಸುನೀತಾ ಯಲಿಗಾರ ಸೇರಿದಂತೆ ಶಿಗ್ಗಾವಿ, ಸವಣೂರ, ಹುಬ್ಬಳ್ಳಿ, ಧಾರವಾಡದ ಗಣ್ಯಮಾನ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಸವರಾಜ ಕುರಗೋಡಿ ಸ್ವಾಗತಿಸಿದರು ವಸಂತಕುಮಾರ ನಿರೂಪಿಸಿದರು.