ಕರೋನಾ ವಾರಿಯರ್ಸಗಳಿಗೆ ಕಿಟ್ ವಿತರಣೆ

ಮುದ್ದೇಬಿಹಾಳ:ಜೂ.2: ಕರೋನ ಪ್ರಂಟಲೈನ್ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳ ಕಾರ್ಯ ವೈಖರಿ ಶ್ಲಾಘನೀಯ ಮತ್ತು ಮಾದರಿಯಾಗಿದೆ ಎಂದು ಕಾಂಗ್ರೆಸ್ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದರು

ಪಟ್ಟಣದ ಮಂಗಳವಾರ ಕಾಂಗ್ರೆಸ್ ಎನ್ ಎಸ್ ಯು ಐ ಘಟಕ ಹಾಗೂ ಎಸ್ ಎಂ ಡಿ ಸಂಸ್ಥೆಯಿಂದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಕೋವಿಡ್ ಐಸೋಲಿಶನ್ ಕಿಟ್ ಹಾಗೂ ಪುರಸಭೆ ಸಿಬ್ಬಂದಿಗಳಿಗೆ ಪೇಸ್ ಶಿಲ್ಡ್,ಮಾಸ್ಕ್ ಸ್ಯಾನಿಟೇಸರ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಸೇವೆ ಬಹು ಅನನ್ಯವಾಗಿದೆ ಕೋವಿಡ್ ಸೋಂಕಿತರ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಮಾಡುತ್ತಿದ್ದಾರೆ ಅವರಿಗೆ ಪಕ್ಷದ ವತಿಯಿಂದ ಕೋವಿಡ್ ಐಸೋಲಿಶನ್ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ಧೇವೆ ಮತ್ತು ನಗರ ಸ್ವಚ್ಚತೆಗೆ ಆದ್ಯತೆಯನ್ನು ನೀಡಿ ಪೌರಕಾರ್ಮಿಕರು ನಗರ ಸ್ವಚ್ಚತೆಯನ್ನು ಕೋವಿಡ್ ಸಂದರ್ಭದಲ್ಲಿ ಮಾಡುತ್ತಿದ್ದಾರೆ ಅವರ ಆರೋಗ್ಯ ಹಿತದೃಷ್ಟಿಯಿಂದ ಅವರಿಗೆ ಪೇಸ್ ಶೀಲ್ಡ್, ಮಾಸ್ಕ್ ಸ್ಯಾನಿಟೇಸರ್ ಉಚಿತವಾಗಿ ವಿತರಣೆ ಮಾಡಿದ್ದೇವೆ ಕೋವಿಡ್ ನಿಂದ ರಕ್ಷಣೆಗೆ ನಮ್ಮ ಮನೆ ನಮ್ಮ ನಗರವನ್ನು ನಾವುಗಳು ಸಹ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದರು

ಈ ವೇಳೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫಿಕ್ ಶಿರೋಳ ಪುರಸಭೆ ಸದಸ್ಯ ರಿಯಾಜ್ ಢವಳಗಿ ಮಾತನಾಡಿ ಪೌರಕಾರ್ಮಿಕರು ಬೆಳಗಿನ ಜಾವ 5 ಗಂಟೆಯಿಂದ ಪಟ್ಟಣದ ಸ್ವಚ್ಚತೆ ಮಾಡಲು ಆರಂಭಿಸುತ್ತಾರೆ ,ಚರಂಡಿ ಕಸ ಎಲ್ಲವನ್ನೂ ಸ್ವಚ್ಚವಾಗಿ ಮಾಡುವ ಅವರ ಸೇವೆ ದೊಡ್ಡದಾಗಿದೆ ಅವರ ಕೋವಿಡ್ ನಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಪೇಸ್ ಶೀಲ್ಡ್ ಮಾಸ್ಕ್ ಧರಿಸಬೇಕು ಅದಕ್ಕೆ ಇಂದು ಕಾಂಗ್ರೆಸ್ ಯೂತ್ ಘಟಕದಿಂದ ಪೇಸ್ ಮಾಸ್ಕ್ ಸ್ಯಾನಿಟೇಸರ್ ನೀಡಿದ್ಧೇವೆ ಎಲ್ಲಾ ಪೌರಕಾರ್ಮಿಕರು ಇವನ್ನು ನಿತ್ಯ ಹಾಕಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದರು

ಪ್ರಭಾರಿ ಮುಖ್ಯಾಧಿಕಾರಿ ಭಾರತಿ ಮಾಡಗಿ ಮಾತನಾಡಿದರು

ಈ ಸಂದರ್ಭದಲ್ಲಿ ತಾಲೂಕ ಮಹಿಳಾ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶ್ರೀಮತಿ ಶೋಭಾ ಶಳ್ಳಗಿ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯೂಸುಫ್ ನಾಯ್ಕೋಡಿ,ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಸಂತೋಷ ನಾಯ್ಕೋಡಿ, ಶರಣು ಚಲವಾದಿ,ಬಾಫ್ ಢವಳಗಿ, ಯಾಸೀನ್ ಬಾಗವಾನ, ರಾಜು ಮುದ್ನಾಳ,ದೀಕ್ಷಿತ್ ದೇಸಾಯಿ, ಮಾನಪ್ಪ ನಾಯಕ,ರಾಮಣ್ಣ ನಾಯಕಮಕ್ಕಳ, ಸಂಗಮೇಶ ಚಲವಾದಿ,ದಾವಲ್ ಗೊಳಸಂಗಿ, ನಿಸಾರ ಮಮದಾಪೂರ, ಹಣಮಂತ ರಾಯ ದೇವರಳ್ಳಿ ಮುಂತಾದವರು ಉಪಸ್ಥಿತರಿದ್ದರು