ಕರೋನಾ ಮುಕ್ತ ಗ್ರಾಮಕ್ಕಾಗಿ ಕರೋನಾ ಸಹಾಯ ವಾಣಿ ಕೇಂದ್ರಕ್ಕೆ ಚಾಲನೆ

ಕಮಲನಗರ :ಮೇ.28: ತಾಲೂಕಿನ ಬೆಳಕುಣಿ(ಭೋ) ಗ್ರಾಮ ಪಂಚಾಯತನಲ್ಲಿ 44 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೊರೊಣಾ ಲಸಿಕೆ ಮುಕ್ತ ಗ್ರಾಮವನ್ನಾಗಿ ಮಾಡುವ ಕುರಿತು ಕರೋನಾ ಸಹಾಯ ವಾಣಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಕಮಲನಗರ ಮಾನ್ಯ ತಹಸಿಲ್ದರಾರು , ಗ್ರಾ.ಪಂ ಅಧ್ಯಕ್ಷರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾ.ಪಂ ಸದಸ್ಯರು ಸೇರಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಕೋವಿಡ ಲಸಿಕೆ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ ಅವರು ಮಾತನಾಡಿ ಲಸಿಕೆ ಸಂಪೂರ್ಣವಾಗಿ ಸುರಕ್ಷತೆಯಿಂದ ಕೂಡಿದೆ ಯಾವುದೇ ಮೌಢ್ಯದ ಮಾತುಗಳಿಗೆ ಕಿವಿಗೊಡದಂತೆ 44 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಸಿದರು .

ತಹಸಿಲ್ದಾರ್ ರಮೇಶ ಪೆದ್ದೇ ಅವರು ಮಾತನಾಡಿ ಕೋವಿಡ್ ಲಸಿಕೆ ತೆಗೆದುಕೊಳ್ಳುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಕೋವಿಡ್ ಸೊಂಕಿನಿಂದ ನಮಗೆ ರಕ್ಷಣೆ ನೀಡುತ್ತದೆ, ಗ್ರಾಮ ಪಂಚಾಯತಲ್ಲಿ ಕರೋನಾ ಸಹಾಯ ವಾಣಿ ಕೇಂದ್ರ ತರೆಯಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮದಲ್ಲಿರುವ 44 ವರ್ಷ ಮೇಲ್ಪಟ್ಟವರು ತಪ್ಪದೇ ಕೋವಿಡ ಲಸಿಕೆ ಪಡೆಯಬೇಕು ತಮ್ಮ ಗ್ರಾಮವನ್ನು ಕೋವಿಡ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ , ಡೋಣಗಾಂವ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಧಿರ, ಪಿ.ಡಿ.ಒ ಬಾಲಾಜಿ ಬಿರದಾರ, ಗ್ರಾ.ಪಂ ಅಧ್ಯಕ್ಷೆ ಕಮಳಾಬಾಯಿ ನಾಗಪ್ಪಾ, ಮಾಜಿ ತಾ.ಪಂ ಸದಸ್ಯರು, ಶಿವಕುಮಾರ ಮೆತ್ರೆ , ಮಾಜಿ ಗ್ರಾ.ಪಂ ಅಧ್ಯಕ್ಷ ಧನರಾಜ ಉದಗಿರೆ, ಗ್ರಾ.ಪಂ ಸದಸ್ಯ ಸುಧಾಕರ ತಪಶಾಳೆ, ರವೀಂದ್ರ ಸ್ವಾಮಿ, ಬಾಲಾಜಿ ವಾಡಿಕರ, ಗ್ರಾಮ‌ಲೇಕ್ಕಾಧಿಕಾರಿ ನಿಂಗಪ್ಪ, ಆಶಾ ಕಾರ್ಯಕರ್ತೆಯರು , ಗ್ರಾ.ಪಂ ಸಿಡಿಇಓ ವಿವೇಕ ಸ್ವಾಮಿ, ಪವನ ವಡಗಾವೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.