ಕರೋನಾ ಭಾರಿ ಇಳಿಕೆ ಇಂದು408 ಜನರಿಗೆ ಸೋಂಕು 3ಸಾವು

ಬೆಂಗಳೂರು, ಜ.14- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಕೊರೊನಾ ಸೋಂಕು ಕಾಣಿಸಿಕೊಂಡ ಹಲವು ತಿಂಗಳ ನಂತರ ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ಐನೂರಕ್ಕಿಂತ ಕಡಿಮೆಯಾಗಿದೆ ಹಾಗೆಯೇ ಬೆಂಗಳೂರು ನಗರದಲ್ಲಿ ದಾಖಲೆ ಎಂಬಂತೆ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇನ್ನೂರರ ಆಸುಪಾಸಿಗೆ ಬಂದಿದೆ.
ಇಂದು ಬೆಂಗಳೂರಿನಲ್ಲಿ ಮೂವರು ಸೋಂಕಿತರು ಮೃತಪಟ್ಟಿದ್ದು ಉಳಿದ ಯಾವುದೇ ಜಿಲ್ಲೆಗಳಲ್ಲೂ ಕರೋನಾ ದಿಂದ ಸಾವು ಸಂಭವಿಸಿಲ್ಲ ಬೇರೆ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.

ಇಂದು ರಾಜ್ಯದಲ್ಲಿ ಜನರಿಗೆ 408 ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ 564 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ ಮೂರು ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 929960ಕ್ಕೆ ಏರಿದೆ. ಇವರಲ್ಲಿ909058 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 8728ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12155 ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 187 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 141 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು255 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇಂದು ಬೆಂಗಳೂರಿನಲ್ಲಿ 03ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 393814ಕ್ಕೆ ಏರಿದೆ. ಇದುವರೆಗೂ 383897 ಜನ ಗುಣಮುಖರಾಗಿದ್ದಾರೆ. 5561 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4355 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 01 ಬಳ್ಳಾರಿ 12ಬೆಳಗಾವಿ 08ಬೆಂಗಳೂರು ಗ್ರಾಮಾಂತರ 19 ಬೀದರ್‌ 07ಚಾಮರಾಜನಗರ 07 ಚಿಕ್ಕಬಳ್ಳಾಪುರ 08ಚಿಕ್ಕಮಗಳೂರು 12 ಚಿತ್ರದುರ್ಗ 19, ದಕ್ಷಿಣ ಕನ್ನಡ 28 ದಾವಣಗೆರೆ 10 ಧಾರವಾಡ 20 ಗದಗದಲ್ಲಿ 03ಹಾಸನದಲ್ಲಿ 12 ಹಾವೇರಿ 01 ಕಲಬುರಗಿ 13 ಕೊಡಗು16 ಕೋಲಾರ 06 ಕೊಪ್ಪಳ 02ಮಂಡ್ಯ 02 ಮೈಸೂರು 23 ರಾಯಚೂರು 03, ರಾಮನಗರ 00 ಶಿವಮೊಗ್ಗ 07, ತುಮಕೂರು 08 ಉಡುಪಿ 02 ಉತ್ತರ ಕನ್ನಡ 12 ವಿಜಯಪುರ 04ಹಾಗೂ ಯಾದಗಿರಿಯಲ್ಲಿ 02ಪ್ರಕರಣಗಳು ಪತ್ತೆಯಾಗಿವೆ.