ಕರೋನಾ ನಿವಾರಣೆಗಾಗಿ ಗ್ರಾಮ ದೇವತೆಗೆ ವಿಶೇಷ ಪೂಜೆ

ಬಳ್ಳಾರಿ ಜೂ 01 : ಗ್ರಾಮಗಳಲ್ಲಿ ಕೊರೊನಾ ಅಬ್ಬರ ತಗ್ಗಬೇಕು ಎಂದು ಪ್ರಾರ್ಥಿಸಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಗ್ರಾಮದ ದೇವತೆಗಳ ವಿಶೇಷ ಪೂಜೆ ನಡೆದಿದೆ.
ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಗ್ರಾಮದ ಸುಂಕಲಮ್ಮ ದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಪ್ರತಿ ಮನೆಯಿಂದ ಓಳಿಗೆ ಎಡೆಯನ್ನು ಅರ್ಪಿಸಲಾಯಿತು. ಗ್ರಾಮದ ಸುತ್ತೆಲ್ಲಾ ಬೇವಿನ ಎಲೆಯ ತೋರಣ ಕಟ್ಟಲಾಗಿತ್ತು.
ಈ ಆಚರಣೆಯಿಂದ ಗ್ರಾಮಕ್ಕೆ ಕೊರೊನಾ ಕಾಲಿಡುವುದಿಲ್ಲ ಎಂಬುದು ನಂಬಿಕೆ. ಪೂಜೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಹಿರಿಯ ಮುಖಂಡರುಗಳು, ಯುವಕರು ಪಾಲ್ಗೊಂಡಿದ್ದರು.