ಕರೋನಾ ನಿರ್ಮೂಲನೆಯಾಗಿ ಎಲ್ಲರಲ್ಲಿ ನಗು ಮೂಡಲಿ

ಕಲಬುರಗಿ:ಮೇ 2: ಭಾರತ ಸೇರಿದಂತೆ ವಿಶ್ವಕ್ಕೆ ವ್ಯಾಪಿಸಿರುವ ಕರೋನಾ ಮಹಾಮಾರಿ ನಿರ್ಮೂಲನೆಯಾಗಿ ಎಲ್ಲರಲ್ಲಿಯೂ ನಗು ಮೂಡಲಿಯೆಂದು ಹಾಸ್ಯ ಕಲಾವಿದ ರಾಜು ಹೆಬ್ಬಾಳ ಆಶಯ ವ್ಯಕ್ತಪಡಿಸಿದ್ದರು.

ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸರಳವಾಗಿ ಜರುಗಿದ ‘ವಿಶ್ವ ನಗುವಿನ ದಿನಾಚರಣೆ’ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನಗುವಿನಲ್ಲಿ ದೊಡ್ಡ ಶಕ್ತಿ ಅಡಗಿದೆ.ಮಾನಸಿಕ ನೆಮ್ಮದಿಗೆ ನಗು ದಿವ್ಯ ಔಷಧವಾಗಿದೆ. ಇಂದಿನ‌ ಆಧುನಿಕತೆಯ ಒತ್ತಡದ ಬದುಕಿನಲ್ಲಿ ನಗು ಮಾಯವಾಗಿದೆ. ಹಸನ್ಮುಖಿ,ಸದಾ ಸುಖಿ ಎಂಬಂತೆ ಯಾವಾಗಲೂ ನಗುತ್ತಾ ಇದ್ದರೆ, ಒತ್ತಡ ರಹಿತ ಬದುಕು ನಮ್ಮದಾಗುತ್ತದೆಯೆಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಮಂಗಾಣೆ, ಎಸ್.ಎಸ್.ಪಾಟೀಲ ಬಡದಾಳ, ನಾಗೇಶ ತಿಮಾಜಿ, ವೀರಯ್ಯ ಪುರಾಣಿಕಮಠ, ಗುರುಮೂರ್ತಿ ಹಿರೇಮಠ, ಸೋಮನಾಥ ಇಂಡಿ, ಶ್ರೀಶೈಲ್ ನಿಗಡಿ, ರೇವಣಸಿದ್ದಪ್ಪ ಪುಟಾಣಿ, ಮಲ್ಲಿನಾಥ ಭುಜರ್ಗೆ ಸೇರಿದಂತೆ ಮತ್ತಿತರರಿದ್ದರು.