ಕರೋನಾ ನಿಯಂತ್ರಣ ತಾಲೂಕು ಮಟ್ಟದ ಅಧಿಕಾರಿಗಳ ಸಭೆ

ಸಿರುಗುಪ್ಪ, ಏ.27: ನಗರದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ ಎಸ್.ಬಿ.ಕೂಡಲಗಿ ಅವರ ನೇತೃತ್ವದಲ್ಲಿ ಕರೋನಾ ನಿಯಂತ್ರಣ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ದಿನೆ ದಿನಕ್ಕೆ ಕರೋನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ರಚಿಸಿದ ತಂಡಗಳೊಂದಿಗೆ ಸಕ್ರಿಯಾವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಈರಣ್ಣ ಮಾತನಾಡಿ ನಮ್ಮ ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಒಟ್ಟು 419 ಪ್ರಕರಣ ದಾಖಲಾಗಿದ್ದು, ಇದರಲ್ಲಿ 107 ಪ್ರಕರಣಗಳು ಗುಣಮುಖರಾಗಿದ್ದು, 220 ಪಾಸಿಟಿವ್ ಪ್ರಕರಣಗಳು ಹೊಂ ಐಸುಲೇಸನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿವೆ, ಕೋವಿಡ್ ಕೇಂದ್ರದಲ್ಲಿ 30 ಪಾಸಿಟಿವ್ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿವೆ, ಖಾಸಗಿ ಆಸ್ಪತ್ರೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿವೆ, 7ಪಾಸಿಟಿವ್ ಪ್ರಕರಣಗಳು ಚಿಕಿತ್ಸೆ ಫಲಕಾರಿಯಾಗದೆ ಸಾವುನ್ನಪ್ಪಿರುತ್ತವೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್, ತಾಲೂಕು ಪಂಚಾಯತ್ ಕಾರ್ಯಾನಿರ್ವಹಕ ಅಧಿಕಾರಿ ಶಿವಪ್ಪ ಸುಬೇದರ್, ತೆಕ್ಕಲಕೋಟೆ ಪ.ಪಂ ಮುಖ್ಯಾಧಿಕಾರಿ ಅರುಣಕುಮಾರ, ಹೋಂ ಐಸಯಲೇನ್ ನೋಡಲ್ ಅಧಿಕಾರಿ ಡಾ.ವಿದ್ಯಾಶ್ರೀ, ಆರ್.ಆರ್.ಟೀಂ ನೋಡಲ್ ಅಧಿಕಾರಿ ಡಾ.ಚೆನ್ನಬಸವ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.