ಕರೋನಾ ನಿಯಂತ್ರಣಕ್ಕೆ ಆಯುಷ್ 64: ಸಿಂಗ್

ಬಳ್ಳಾರಿ, ಮೇ.18: ಕರೋನಾ ಬರದಂತೆ ತಡೆಯಲು ಆಯುರ್ವೇದದ ಆಯುಷ್ 64 ಔಷಧಿ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಮೋದಿ ಅವರ ವಿಡಿಯೋ ಸಂವಾದದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಹೆಚ್ಚು ಕರೋನಾ ಸೋಂಕು ಇರುವ ಜಿಲ್ಲೆಗಳಲ್ಲಿ ನಿಯಂತ್ರಣದ ಬಗ್ಗೆ ಮಾತನಾಡಿದ್ದಾರೆ. ಸುದೀರ್ಘ ಚರ್ಚೆ ಮಾಡಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಂದ ಎಲ್ಲ ರೀತಿಯ ಜನಪ್ರತಿನಿಧಿಗಳು ಗೆದ್ದವರು, ಸೋತವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ತಿಳಿಸಿದ್ದಾರೆ.
ಆಕ್ಸಿಜನ್ ‌ಮಾನಿಟರ್‌ ಕಮಿಟಿ ಮಾಡಲು ಫ್ರೆಂಟ್ ಲೈನ್ ವಾರಿಯರ್ ವಿಶ್ವಾಸಕ್ಕೆ ತೆಗೆದುಕೊಳ್ಳಿ. ರೋಗಿಗಳಿಗೆ ಅಂಗನವಾಡಿ, ಆಶಾಗಳಿಂದ ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕು ಎಂದರೆಂದರು.

ಜಿಂದಾಲ್ ಆಕ್ಸಿಜನ್ ಸಹಿತ ಬೆಡ್ ಗಳ ಆಸ್ಪತ್ರೆ ನಾಳೆ ಆರಂಭ
ನಾಳೆ ಮಧ್ಯಾಹ್ನದ ವೇಳೆಗೆ ಜಿಂದಾಲ್ ‌ನಲ್ಲಿರೋ ಆಕ್ಸಿಜನ್ ಸಹಿತ ಸಾವಿರ ಬೆಡ್ಗಳ ಪೈಕಿ ಮೂನ್ನುರು ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆಂದರು.
ಮೂರ್ನಾಲ್ಕು ತಜ್ಞ ವೈದ್ಯರು, 8 ಕ್ಕೂ ಹೆಚ್ಚು ವೈದ್ಯರು ನೇಮಕ ಆಗಿದೆ ಇನ್ನು ‌ನೇಮಕ‌ ನಡೆಯುತ್ತಿದೆ. ಅಲ್ಲದೆ 42 ಜನ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳ ಮೂಲಕ ಈ ಆಸ್ಪತ್ರೆ ನಡೆಸಲಿದೆ. ಶಕ್ತಿ ಮೀರಿ ಕೊರೊನಾ ನಿಯಂತ್ರಣಕ್ಕೆ ಹೋರಾಟ ಮಾಡ್ತಿದ್ದೇವೆಂದರು.
ಪ್ರಧಾನಿ ಮೋದಿ ಅವರಿಂದ ವರ್ಚುವಲ್ ಮೂಲಕ‌ ಈ ಆಸ್ಪತ್ರೆ ಉದ್ಘಾಟನೆಯ ಪ್ರಯತ್ನ ನಡೆದಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಸ್ವತಃ ಜನ‌ಪ್ರತಿನಿಧಿಗಳು ತೆರಳಿ‌ ಮೈಕ್ ನಲ್ಲಿ ಹೆಚ್ಚು ಹೆಚ್ಚು ಜಾಗೃತಿ ‌ಮೂಡಿಸೋ ಕಾರ್ಯಕ್ರಮ ‌ಮಾಡ್ತೇವೆಂದು ಸಹ ಅವರು ತಿಳಿಸಿದರು.