ಕರೋನಾ ದೂರವಾಗಿಲ್ಲ ಮಾಸ್ಕ್ ಇಲ್ಲದಿದ್ದರೆ ದಂಡ ತಪ್ಪಿದ್ದಲ್ಲ

ಸಂಡೂರು: ನ 0 7 : ಕರೋನಾ ಮಹಾಮಾರಿ ನಮ್ಮಿಂದ ದೂರವಾಗಿಲ್ಲ ಅದ್ದರಿಂದ ಕಡ್ಡಾಯವಾಗಿ ದ್ವಿಚಕ್ರ ಸವಾರರು ಮಾಸ್ಕ ಹಾಕಿಕೊಂಡು ಹೋಗಬೇಕು ಇಲ್ಲವಾದಲ್ಲಿ ಪ್ರಥಮ ಬಾರಿ 100 ರೂಪಾಯಿ ದಂಡ ಹಾಗೂ ಎರಡನೇ ಬಾರಿಗೆ 200 ರೂಪಾಯಿ ದಂಡ ಹಾಕಲಾಗುವುದು ಎಂದು ಪುರಸಭೆಯ ಅಧಿಕಾರಿ ಮಲ್ಲೇಶಪ್ಪ ತಿಳಿಸಿದರು.
ಅವರು ಇಂದು ಪಟ್ಟಣದ ವಿಜಯ ವೃತ್ತದಲ್ಲಿ ಕರೋನಾ ಜಾಗೃತಿ ಹಾಗೂ ಮಾಸ್ಕ ಧರಿಸದೇ ಇರುವವರಿಗೆ ದಂಡ ವಸೂಲಿ ಕಾರ್ಯವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಮಾತನಾಡಿ ಕರೋನಾ ನಮ್ಮ ಕಣ್ಣಿಗೆ ಕಾಣದು, ಅದ್ದರಿಂದ ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು, ಅಂಗಡಿಗೆ ಹೋದ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಅಲ್ಲದೆ ಅಂಗಡಿಯವರು ನೀಡುವ ಸ್ಯಾನಿಟೈಸರ್ ಬಳಸಬೇಕು, ಮನೆಗೆ ಹೋದಮೇಲೆ ಕಡ್ಡಾಯವಾಗಿ ಕೈ ತೊಳೆಯಬೇಕು, ಇದರಿಂದ ಹರಡುವ ಕರೋನಾ ರೋಗವನ್ನು ತಡೆಯಬಹುದು, ಇಲ್ಲವಾದಲ್ಲಿ ಅದು ಅತಿ ಹೆಚ್ಚು ಹರಡಿ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕುವುದಲ್ಲ, ಮತ್ತೋಬ್ಬರಿಗೂ ರೋಗ ಹರಡವ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ವಿಭಾಗದ ಅಧಿಕಾರಿ ಅನ್ನಪೂರ್ಣ, ಕಂದಾಯ ಅಧಿಕಾರಿ ಬಸವರಾಜ ಅವರು ರಸ್ತೆಯಲ್ಲಿ ಮಾಸ್ಕ ಇಲ್ಲದೆ ಓಡಾಡುತ್ತಿದ್ದ ದ್ವಿಚಕ್ರವಾಹನ, ನಾಲ್ಕು ಚಕ್ರದ ವಾಹನಗಳನ್ನು ಹಾಗೂ ನಡೆದುಕೊಂಡು ಹೋಗುವ ಸಾರ್ವಜನಿಕರನ್ನು ತಡೆದು ಅವರಿಗೆ ದಂಡ ಹಾಕಿ ಅವರಿಗೆ ಕಡ್ಡಾಯ ಮಾಸ್ಕ ಹಾಕಿಸುವ ಕಾರ್ಯ ಮಾಡಿದರು.
ಕೆಲ ಸಾರ್ವಜನಿಕರು ದೂರದಿಂದಲೇ ನೋಡಿ ತಮ್ಮ ವಾಹನಗಳನ್ನು ಹಿಂತಿರುಗಿಸಿಕೊಂಡು ಕೈಗೆ ಸಿಗದಂತೆ ಹೋಗುತ್ತಿರುವುದು ಕಂಡು ಬಂದಿತು, ಕೆಲವರು ಕೈಯಲ್ಲಿ ಹಣ ವಿಲ್ಲವೆಂದು ಜೇಬು ತೋರಿಸಿ ಇದೊಂದು ಬಾರಿ ಬಿಡಿ ಎಂದು ಕರವಸ್ತ್ರ ಕಟ್ಟಿಕೊಂಡು ಸಾಗಿದರು, ಅದರೆ ಬಹಳಷ್ಟು ಯುವಕರು ತಮ್ಮ ಪುಂಡಾಟಿಕೆಯಿಂದ ಹೋಗುವವರನ್ನು ತಡೆದು ಮಾಸ್ಕ ಹಾಕದೆ ಇದ್ದು ಅವರಿಗೆ ದಂಡ ಹಾಕಿದರು. ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿಗಳು, ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಇತರರು ಉಪಸ್ಥಿತರಿದ್ದರು.