ಕರೋನಾ ತಡೆಗೆ ನಾಳೆ ಮುಖ್ಯಮಂತ್ರಿಗಳಿಂದ ಕಠಿಣ ನಿಯಮ ಪ್ರಕಟ : ಆರ್ ಅಶೋಕ್

ಬೆಂಗಳೂರು ಏಪ್ರಿಲ್ 19 ರಾಜ್ಯದಲ್ಲಿ ಕೊರೋನಾ ಸೋಂಕನ್ನು ತಡೆಯಲು ಲಾಕ್ಡೌನ್ ಜಾರಿ ಬೇಡ ಎಂದು ವಿರೋಧ ಪಕ್ಷದ ಬಹುತೇಕ ಶಾಸಕರು ಸಲಹೆ ಮಾಡಿದ್ದು ಅದನ್ನ ಗಮನದಲ್ಲಿಟ್ಟುಕೊಂಡು ಕರೋನಾ ತಡೆಗೆ ಕೆಲವು ಕಠಿಣನಿಯಮಗಳನ್ನು ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ನಿರ್ಧಾರ ಕೈಗೊಳ್ಳುವರು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಕರೋನ ತಡೆ ಸಂಬಂಧ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಇಂದು ವಿಧಾನಸೌಧದಲ್ಲಿ ಬೆಂಗಳೂರಿನ ಸಚಿವರು ಶಾಸಕರು ಗಳ ಜೊತೆ ಸುಮಾರು 3 ಗಂಟೆಗೆ ಹೆಚ್ಚುಕಾಲ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರು ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದು ನಾಳೆ ವಿರೋಧ ಪಕ್ಷದ ನಾಯಕರುಗಳು ಸಭೆಯ ನಂತರ ಕರೋನಾ ತಡೆಯ ಹೊಸ ತೀರ್ಮಾನಗಳನ್ನು ಪ್ರಕಟಿಸುವರು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದಿನ ಸಭೆಯ ಅಭಿಪ್ರಾಯಗಳನ್ನು ಆಲಿಸಿದ್ದು ನಾಳೆ ಸರ್ವಪಕ್ಷ ಮುಖಂಡರುಗಳ ಸಭೆಯಲ್ಲೂ ಚರ್ಚೆ ನಡೆಸಿ ಎರಡು ಸಭೆಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ಕರೋನಾ ತಡೆಯಲು ಕೆಲ ಕಠಿಣ ತಿರ್ಮಾನಗಳನ್ನು ಪ್ರಕಟಿಸುವರು ಎಂದು ಅವರು ಹೇಳಿದರು.
ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದ ವಿರೋಧಪಕ್ಷದ ಶಾಸಕರುಗಳು ಲಾಕ್ಡೌನ್ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುವರು ಎಂದರು.
ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಶಾಸಕರು ಕೊರೊನಾ ತಡೆಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಹಲವರು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದರು ಕೆಲವರು ಆಕ್ಸಿಜನ್ ಕೊರತೆಯ ಬಗ್ಗೆ ಪ್ರಸ್ತಾಪಿಸಿದರು ಆದರೆ ಆಕ್ಸಿಜನ್ ಕೊರತೆ ಇಲ್ಲ ಎಂಬುದನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆಚಿಕಿತ್ಸೆ ನೀಡಲು ಬೆಡ್ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಇನ್ನು ಮೂರು ದಿನಗಳಲ್ಲಿ ಖಾಸಗಿ ಆಸ್ಪತ್ರೆಯವರು 7000 ಗಳನ್ನು ನೀಡಲಿದ್ದಾರೆ ಎಂದರು.
ಕೊರೋನಾ ತಡೆಗೆ ಸರಕಾರ ಕಳೆದ ವರ್ಷ ಉತ್ತಮ ಕ್ರಮಗಳನ್ನು ಕೈಗೊಂಡಿತು ಅದೇ ಕ್ರಮಗಳನ್ನು ಈಗಲೂ ಮುಂದುವರಿಸುವಂತೆ ಶಾಸಕರು ಸಲಹೆ ಮಾಡಿದ್ದಾರೆ ಎಂದು ಆರ್ ಅಶೋಕ್ ಹೇಳಿದರು.