ಕರೋನಾ ಜಾಗೃತಿ ಅಲ್ಲ ಇದು ಜೀವನದ ಜಾಗೃತಿ

ಔರಾದ್:ಮೇ.30: ಪ್ರತಿಯೊಬ್ಬರು ಕೋವಿಡ್-19 ವ್ಯಾಕ್ಸೀನ್ ಪಡೆಯುವ ಮೂಲಕ ತಮ್ಮ ಹಾಗೂ ಕುಟುಂಬದ ಸುರಕ್ಷತೆಗೆ ಮುಂದಾಗಬೇಕು ಇದು ಕೋರೋನಾ ರೋಗದ ಜಾಗೃತಿ ಅಲ್ಲದೆ ನಮ್ಮ ಅತ್ಯಮುಲ್ಯವಾದ ಜೀವನದ ಜಾಗೃತಿಯಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ದೇಶಪಾಂಡೆ ಹೇಳಿದರು.

ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಬೀದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್ ಹಾಗೂ ಗ್ರಾಪಂ ಎಕಲಾರ ಹಾಗೂ ಸಹಬಾಳ್ವೆ ಸಂಸ್ಥೆ ಕೊಳ್ಳೂರ ಸಂಯುಕ್ತಾಶ್ರಯದಲ್ಲಿ ನಡೆದ ಕೋವಿಡ್-19 ಕುರಿತು ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಅವರು ಮಾತನಾಡಿ, ವ್ಯಾಕ್ಸೀನ್ ಪಡೆಯಲು ಗ್ರಾಮದ ಜನರು ಮುಂದೆ ಬರುತ್ತಿಲ್ಲ. ಲಸಿಕೆ ಪಡೆಯುವ ಬಗ್ಗೆ ತಲೆಯಲ್ಲಿರುವ ತಪ್ಪು ಕಲ್ಪನೆಗಳನ್ನು ತೆಗೆದು ಹಾಕಬೇಕು. ವ್ಯಾಕ್ಸೀನ್ ಪಡೆದವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬಿರುವುದಿಲ್ಲ ಧೈರ್ಯದಿಂದ ಎಲ್ಲರೂ ವ್ಯಾಕ್ಸೀನ್ ಪಡೆಯಿರಿ, ವಾಟ್ಸಾಪಗಳಲ್ಲಿ ಬರುವ ಗುಳಿಗೆಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬೇಡಿ ಎಂದು ಹೇಳಿದರು.

ಸಹಬಾಳ್ವೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮಿ ಮಾತನಾಡಿ, ಜಿಲ್ಲಾಡಳಿತ ನಮ್ಮ ಸಂಸ್ಥೆಗಳ ಮೇಲೆ ಭರವಸೆ ಮಾಡಿ ಜನರಲ್ಲಿ ಜಾಗೃತಿ ಮಾಡಲು ನಮ್ಮ ಸಹಕಾರದಿಂದ ಮಾಹಿತಿ ಶಿಕ್ಷಣ ಮತ್ತು ಲಸಿಕಾಕರಣವನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಲು ನಮ್ಮ ಹಾಗೂ ಇಲಾಖೆಯ ಸಹಕಾರದಿಂದ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದಂತೆ ನಿಸ್ವಾರ್ಥ ಮನೋಭಾವದಿಂದ ಸಂಸ್ಥೆಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ ಆದರಿಂದ ಎಲ್ಲರೂ ತಪ್ಪದೆ ಲಸಿಕೆ ಪಡೆಯಲು ವಿನಂತಿಸಿದರು.ಈ ಸಂದರ್ಭದಲ್ಲಿ ಮಾಸ್ಕ ಹಾಗೂ ಸೈನಿಟೈಸರ ವಿತರಿಸಲಾಯಿತು. ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ ಕೋವಿಡ್ – 19 ಕುರಿತು ಜಾಗೃತಿ ಮೂಡಿಸಲಾಯಿತು.

ಗ್ರಾಪಂ ಅಧ್ಯಕ್ಷ ಸಮರ್ಥರಾವ ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಾಲಾಜಿ ನಾಯಕವಾಡೆ, ನೂಡಲ್ ಎನ್ ಜಿಓ ಪ್ರತಿನಿಧಿ ಸುನಿಲಕುಮಾರ ವಾಘಮಾರೆ, ಗ್ರಾಪಂ ಸದಸ್ಯ ದತ್ತಾತ್ರಿ ರ‍್ಯಾಕಲೆ, ಸುಲೋಚನಾ ಹೋನ್ನಶಟ್ಟೆ, ಎಕಲಾರ ಸಮುದಾಯಯ ಆರೋಗ್ಯ ಅಧಿಕಾರಿ ಡ್ಯಾನಿಯಲ್, ಅಶೋಕ ಚಂದಾ, ಸುರ್ಯಕಾಂತ ರ‍್ಯಾಕಲೆ, ರಿಯಾಜಪಾಶ ಕೊಳ್ಳೂರ, ಸಿದ್ದಪ್ಪ ಕಂಗಟೆ, ರಾಜಕುಮಾರ್ ಧಬಡೆ, ಬಸವರಾಜ ನಾಗರಾಳೆ ಕಂದಾಯ ಇಲಾಖೆ, ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.