ಕರೋನಾ ಗಣನೀಯ ಇಳಿಕೆ ಇಂದು 772 ಜನರಿಗೆ ಸೋಂಕು

ಬೆಂಗಳೂರು, ಡಿ. 21- ರಾಜ್ಯದಲ್ಲಿ ಇಂದು ಕರೋನ ಕೊರೊನಾ ಸೋಂಕು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಗುಣಮುಖರಾಗುವ ಸಂಖ್ಯೆಯೂ ಹೆಚ್ಚಿದೆ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
, ರಾಜ್ಯದಲ್ಲಿ ಇಂದು ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಸಾವಿರದಿಂದ ಕೆಳಗಿಳಿದಿದೆ. ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಐನೂರಕ್ಕಿಂತ ಕೆಳಗೆ ಬಂದಿದೆ ಇಂದು ರಾಜ್ಯದಲ್ಲಿ 772ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ1261 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ 07 ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 910241ಕ್ಕೆ ಏರಿದೆ. ಇವರಲ್ಲಿ884205ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 14001 ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12016 ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 219 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 363 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು709 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇಂದು ಬೆಂಗಳೂರಿನಲ್ಲಿ 05 ಸೋಂಕಿತರು ಸಾವನ್ನಪ್ಪಿದ್ದಾರೆ
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 383231ಕ್ಕೆ ಏರಿದೆ. ಇದುವರೆಗೂ 369701 ಜನ ಗುಣಮುಖರಾಗಿದ್ದಾರೆ. 9256 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4273 ಜನ ಕೊರೊನಾಗೆ ಬಲಿಯಾಗಿದ್ದಾರೆ
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 00, ಬಳ್ಳಾರಿ 36ಬೆಳಗಾವಿ 13, ಬೆಂಗಳೂರು ಗ್ರಾಮಾಂತರ 19 ಬೀದರ್‌ 08ಚಾಮರಾಜನಗರ 15 ಚಿಕ್ಕಬಳ್ಳಾಪುರ 26 ಚಿಕ್ಕಮಗಳೂರು 04 ಚಿತ್ರದುರ್ಗ 19 ದಕ್ಷಿಣ ಕನ್ನಡ 24 ದಾವಣಗೆರೆ 07, ಧಾರವಾಡ 15 ಗದಗದಲ್ಲಿ 05ಹಾಸನದಲ್ಲಿ 32, ಹಾವೇರಿ 04 ಕಲಬುರಗಿ 10 ಕೊಡಗು13, ಕೋಲಾರ 31 ಕೊಪ್ಪಳ 05ಮಂಡ್ಯ 24 ಮೈಸೂರು40 ರಾಯಚೂರು 04 ರಾಮನಗರ 05 ಶಿವಮೊಗ್ಗ 09, ತುಮಕೂರು 10 ಉಡುಪಿ 03, ಉತ್ತರ ಕನ್ನಡ 10 ವಿಜಯಪುರ 15 ಹಾಗೂ ಯಾದಗಿರಿಯಲ್ಲಿ 03ಪ್ರಕರಣಗಳು ಪತ್ತೆಯಾಗಿವೆ.