ಕರೋನಾ ಕುಸಿತ

ಬಳ್ಳಾರಿ ಜ 02 : ಜಿಲ್ಲೆಯಲ್ಲಿ ಕರೋನಾ ಸೋಂಕು ಹರಡುತ್ತಿರುವುದು ಕುಸಿಯತೊಡಗಿದೆ. ನಿನ್ನೆ ದಿನ 3359 ಜನರ ಗಂಟಲ ದ್ರವ ಪರೀಕ್ಷೆ ಮಾಡಿದರೆ ಅದರಲ್ಲಿ ಕೇವಲ 4 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ.
ನಿನ್ನೆ ದಿನ 41 ಜನರು ಗುಣಮುಖರಾಗಿ ಬಿಡುಗಡೆಹೊಂದಿದ್ದು. ಜಿಲ್ಲೆಯಲ್ಲಿ ಸಧ್ಯ 148 ಜನರು ಮಾತ್ರ ಈ ಸೋಂಕಿನಿಂದ ಕೂಡಿದ್ದಾರೆ. ಈ ವರೆಗೆ 1 ಲಕ್ಷ 96 ಸಾವಿರದ 197 ರ್ಯಾಪಿಡ್ ಮತ್ತು 2 ಲಕ್ಷ 17 ಸಾವಿರದ 641 ಪ್ರಯೋಗಾಲಯ ಸೇರಿಂದತೆ 4 ಲಕ್ಷ 13 ಸಾವಿರದ 838 ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 38 ಸಾವಿರದ 860 ಸ್ಯಾಂಪಲ್ ನಲ್ಲಿ ಸೋಂಕು ಕಾನಿಸಿಕೊಂಡಿತ್ತು. ಆ ಪೈಕಿ ಈಗಾಗಲೇ 38 ಸಾಔಇರದ 115 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಸೋಂಕಿನಿಂದ ಈವರೆಗೆ ಜಿಲ್ಲೆಯಲ್ಲಿ 597 ಜನರು ಸಾವನ್ನಪ್ಪಿದ್ದಾರೆ.
ಸಧ್ಯ ಸಿರುಗುಪ್ಪ, ಕೂಡ್ಲಿಗಿ, ಹಗರಿಬೊಮ್ಮಹಳ್ಳಿಯಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಗೆ ಕುಸಿದಿದೆ. ಕೆಲ ದಿನಗಳಲ್ಲಿ ಈ ತಾಲೂಕುಗಳು ಕೊರೋನಾ ಮುಕ್ತ ಆಗಬಹುದು.