ಕರೋನಾ ಕತ್ತಲಿನಲ್ಲಿ ಮಕ್ಕಳ ಆಟ ಪಾಠದ ಬೆಳಕು

ಮೈಸೂರು: ಮೇ.27: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೆ.ಆರ್.ಎಸ್ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ಎದುರಿನ ಡಾ.ಬಿ.ಆರ್ ಅಂಬೇಡ್ಕರ್ ಕಾಲೋನಿಯ ನಿವಾಸಿಯ ಮಕ್ಕಳಿಗೆ ಕೊರೋನಾ ಸೊಂಕು ತಡೆಗಟ್ಟಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಟ ಪಾಠದ ಬೆಳಕು ಕಾರ್ಯಕ್ರಮದೊಂದಿಗೆ ಮಕ್ಕಳ ಆಟದ ಪದಾರ್ಥಗಳಾದ ಚೆಸ್ ಬೋರ್ಡ್, ಲೂಡೋ, ಕೇರಂ ಬೋರ್ಡ್, ಅಳಿಗೂಳಿ ಮನೆ, ಪದಾರ್ಥಗಳು ನೀಡಿ ಮನೆಯಲ್ಲೇ ಇರೋಣ ಕೊರೋನಾ ತಡೆಯೋಣ ಎನ್ನುವ ಸಂದೇಶದೊಂದಿಗೆ ಜಾಗೃತಿ ಮೂಡಿಸಲಾಯಿತು.
ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ಕೊರೊನಾ ಅವಾಂತರ ತಡೆಗಟ್ಟಲು ರಾಜ್ಯಸರ್ಕಾರ ಘೋಷಿಸಲಾಗಿರುವ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಕ್ಕಳು ಸಾಮಾಜಿಕ ಸಂಪರ್ಕವಿಲ್ಲದೆ ಖಿನ್ನತೆಗೊಳಗಾಗುವ ಸಂಧರ್ಭ ಎದುರಾಗದಂತೆ ನೋಡಿಕೊಳ್ಳುವುದು ಪೆÇೀಷಕರ ಕರ್ತವ್ಯವಾಗಿರುತ್ತದೆ, ಹಾಗಾಗಿ ಕತ್ತಲೆಯಲ್ಲಿ ಆಟ-ಪಾಠದ ಬೆಳಕು ಅರಿವು ಮೂಡಿಸಿ ಮನೆಯಲ್ಲೇ ಇರೋಣ ಕೊರೋನಾ ಓಡಿಸೋಣ ಆಟ ಪಾಠ ಮನೆಯಲ್ಲೆ ಮಾಡೋಣ ಎಂದು ಆಟಿಕೆ ಪಾದಾರ್ಥಗಳು ನೀಡಿ ಮನೆಯ ಒಳಗೆ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಂತರ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ ಕೊರೋನಾ 3ನೇ ಅಲೆಯಿಂದ ಸಣ್ಣಪುಟ್ಟ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ ಎಂದು ತಜ್ಞರ ಸೂಚನೆ ಮೇರಗೆ ನಮ್ಮ ಸುತ್ತಮುತ್ತಲಿನ ಮನೆಗಳ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಿದೆ ಮತ್ತು ನಗರಪಾಲಿಕೆ ಈಗಲೇ ಕೆಲವು ಮುಂಜಾಗೃತ ಕ್ರಮ ವಹಿಸಬೇಕಿದೆ ಮಕ್ಕಳ ವೈದ್ಯತಜ್ಞರ ಸಮಿತಿ, ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಬೆಡ್ ಆಕ್ಸಿಜನ್ ಬಗ್ಗೆ ಗಮನವಹಿಸಬೇಕಿದೆ, ಮತ್ತು ಮನೆಯಲ್ಲೆ ಇದ್ದರೆ ಸೊಂಕನ್ನು ತಡೆಯಬಹುದು ಪಾರಂಪರಿಕ ದೇಶಿ ಆಟದ ಬಗ್ಗೆ ಹಾಗೂ ಮಕ್ಕಳಲ್ಲಿ ಸಂಸ್ಕಾರ ಶಿಕ್ಷಣದ ಬಗ್ಗೆ ಪೆÇೀಷಕರು ಅರಿವು ಮೂಡಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಎಂ.ಎನ್.ನವೀನ್ ಕುಮಾರ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಯುವ ಬಳಗದ ನವೀನ್, ಮಂಜುನಾಥ್, ಪ್ರಮೋದ್ ಗೌಡ, ಪಾಪಣ್ಣ, ರವಿ, ದುರ್ಗಾಪ್ರಸಾದ್, ರಾಕೇಶ್ ಕುಂಚಿಟಿಗ, ಹರೀಶ್ ನಾಯ್ಡು , ನಾವು ಇನ್ನಿತರರು ಹಾಜರಿದ್ದರು