ಕರೋನಾ ಕಂಟ್ರೋಲ್‍ಗೆ ಲಾಕ್‍ಡೌನ ಓಣಿಗಳಲ್ಲಿಯೂ ಮುಂದುವರೆದ ಪೊಲೀಸ ಕಾರ್ಯಾಚರಣೆ

ಹೊಸಪೇಟೆ ಮೇ 21: ಕರೋನಾ ಕಂಟ್ರೋಲ್ ಮಾಡುವ ದೃಷ್ಟಿಯಿಂದ ಜಾರಿಮಾಡಿರುವ ಲಾಕ್‍ಡೌನ್ ನಡುವೆಯೂ ರಸ್ತೆ, ಓಣಿಗಳಲ್ಲಿ ಅನಗತ್ಯವಾಗಿ ತಿರುಗಾಡುವ ಅನೇಕರಿಗೆ ಲಾಠಿ ರುಚಿ ತೋರುವ ಹಾಗೂ ವಾಹನಗಳನ್ನು ಜಪ್ತುಮಾಡುವ ಮೂಲಕ ಪೊಲೀಸರು ಕಾರ್ಯಾಚರಣೆಯನ್ನು ಮೂರುನೇ ದಿನವೂ ಮುಂದುವರೆಸಿದ್ದಾರೆ.
ಬೆಳಂಬೆಳಿಗ್ಗೆ ನಗರದಾದ್ಯಂತ ಹೊಸಪೇಟೆ ನಗರಠಾಣೆ, ಬಡಾವಣೆ, ಸಂಚಾರಿ ಪೊಲೀಸಠಾಣೆ, ಹಾಗೂ ಗ್ರಾಮಾಂತರ ಪೊಲೀಸಠಾಣೆಯ ಇನ್ಸ್‍ಪೇಕ್ಟರ್, ಸಬ್ ಇನ್ಸ್‍ಪೇಕ್ಟರ್ ಹಾಗೂ ಸಿಬ್ಬಂದಿಗಳು ಗುಂಪು ಗುಂಪಾಗಿ ಮುಖ್ಯ ರಸ್ತೆ, ಓಣಿಯಲ್ಲಿ ಹೊಕ್ಕು, ಅನಗತ್ಯವಾಗಿ ತಿರುಗುವ ಹಾಗೂ ಸಣ್ಣಪುಟ್ಟ ವ್ಯವಹಾರದಲ್ಲಿ ತೊಡಗಿದ ಜನರನ್ನು ಹಿಡಿದು ತಂದು ದಂಡಂ ದಶಗುಣಂ ಎಂಬಂತೆ ಶಿಕ್ಷೆಗೊಳಪಡಿಸುವ ಮೂಲಕ ಜನ ಸಂಚಾರ ನಿಯಂತ್ರಣಕ್ಕೆ ಮುಂದಾಗಿದ್ದರು.
ಪೊಲೀಸರು ಹಿಡಿ ಹಿಡಿಯುತ್ತಿದ್ದಂತೆಯೇ ಸಾರ್.. ಬಿಟ್ಟುಬಿಡಿ ಸಾರ್, ಇನ್ನೊಂದು ಸಲ ಬರೋಲ್ಲಾ, ನಮ್ಮ ಅಮ್ಮ ಒಬ್ಬರೇ ಇದಾರ ಬಿಟ್ಟುಬಿಡಿ ಸಾರ್ ಎಂದು ಗೋಳಾಡುವ ಮೂಲಕ ಜೀವ ಪೊಲೀಸರ ವಾಹನ ಹತ್ತಲು ನಾಟಕಾ ಮಾಡಲಾರಂಭಿಸಿದರು ಅಂತು ಹರಸಹಾಸ ಪಟ್ಟು ಓಣಿಗಳಿಂದ ಅನಗತ್ಯವಾಗಿ ತಿರುಗುವವರನ್ನು ಜೀಪ್ ಹತ್ತಿಸಿದ ಪೊಲೀಸರು ಓಣಿಗಳಲ್ಲಿ ಪಾಲಕರಿಗೂ ಭಯ ಬರುವಂತೆ ತಮ್ಮ ಮಕ್ಕಳನ್ನು ಅನಗತ್ಯವಾಗಿ ತಿರುಗದಂತೆ ತಡೆಯುವಲ್ಲಿ ಯಶಸ್ವಿಯಾದರು,
ಸುಮಾರ ವಾಹನಗಳು ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಠಾಣೆಗೆ ಕರೆತಂದು ಮತ್ತೊಮ್ಮ ತಪ್ಪು ಮಾಡದಂತೆ ಮಾಡುವ ಮೂಲಕ ಕರೋನಾ ನಿಯಂತ್ರಣಕ್ಕೆ ಮುಂದಾಗಿರುವ ಪೊಲೀಸರ ಹರಸಾಹಸ ಮುಂದುವರೆಸಿದ್ದರು.