ಕರೋನಾ ಇಂದು 911ಜನರಿಗೆ ಸೋಂಕು,11ಸಾವು

ಬೆಂಗಳೂರು, ಡಿ.27- ರಾಜ್ಯದಲ್ಲಿ ಇಂದು ಕರೋನ ಕೊರೊನಾ ಸೋಂಕು ಗಣನೀಯ ಇಳಿಕೆ ಕಂಡಿದೆ ಪ್ರಕರಣಗಳ ಸಂಖ್ಯೆ ಸಾವಿರದಿಂದ ಕೆಳಗಿಳಿದಿದೆಯಾದರು ನೆನ್ನೆಗಿಂತ ಸೋಂಕು ಪ್ರಕರಣಗಳು ಕೊಂಚ ಏರಿಕೆಯಾಗಿದೆ.
ಗುಣಮುಖರಾಗುವ ಸಂಖ್ಯೆಯೂ ಹೆಚ್ಚಿದೆ.
ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಇಳಿಕೆಯತ್ತ ಮುಖ ಮಾಡಿದ್ದರೂ , ನೆನ್ನೆಗಿಂತ ಇಂದು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 911 ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ1214 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಕೊರೊನಾದಿಂದ 11 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 916256ಕ್ಕೆ ಏರಿದೆ. ಇವರಲ್ಲಿ891095ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 13080ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12062ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 209 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 542 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು754 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ 08ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 386599ಕ್ಕೆ ಏರಿದೆ. ಇದುವರೆಗೂ 373724 ಜನ ಗುಣಮುಖರಾಗಿದ್ದಾರೆ. 8575 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4299ಜನ ಕೊರೊನಾಗೆ ಬಲಿಯಾಗಿದ್ದಾರೆ.


ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 04 ಬಳ್ಳಾರಿ 11ಬೆಳಗಾವಿ18 ಬೆಂಗಳೂರು ಗ್ರಾಮಾಂತರ 20 ಬೀದರ್‌ 07ಚಾಮರಾಜನಗರ 11 ಚಿಕ್ಕಬಳ್ಳಾಪುರ 32ಚಿಕ್ಕಮಗಳೂರು 09 ಚಿತ್ರದುರ್ಗ 21ದಕ್ಷಿಣ ಕನ್ನಡ 18 ದಾವಣಗೆರೆ 15, ಧಾರವಾಡ 17 ಗದಗದಲ್ಲಿ 04ಹಾಸನದಲ್ಲಿ 34 ಹಾವೇರಿ 03 ಕಲಬುರಗಿ 12 ಕೊಡಗು07, ಕೋಲಾರ 09 ಕೊಪ್ಪಳ 03ಮಂಡ್ಯ 19 ಮೈಸೂರು40 ರಾಯಚೂರು 05ರಾಮನಗರ 00 ಶಿವಮೊಗ್ಗ 12 ತುಮಕೂರು 20 ಉಡುಪಿ 01, ಉತ್ತರ ಕನ್ನಡ 11 ವಿಜಯಪುರ 05ಹಾಗೂ ಯಾದಗಿರಿಯಲ್ಲಿ 01ಪ್ರಕರಣಗಳು ಪತ್ತೆಯಾಗಿವೆ.