ಕರೋನಾ ಇಂದು 877ಜನರಿಗೆ ಸೋಂಕು,6ಸಾವು

ಬೆಂಗಳೂರು, ಜ.1- ಹೊಸವರ್ಷದ ಮೊದಲದಿನವಾದ ಇಂದು ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯ ಇಳಿಕೆ ಕಂಡಿದೆ ಪ್ರಕರಣಗಳ ಸಂಖ್ಯೆ ಸಾವಿರದ ಒಳಗೆ ಇದೆ ಗುಣಮುಖರಾಗುವ ಸಂಖ್ಯೆಯೂ ಹೆಚ್ಚಿದೆ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ.
ಇಂದು ರಾಜ್ಯದಲ್ಲಿ 877 ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ1084 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ 06 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 920373ಕ್ಕೆ ಏರಿದೆ. ಇವರಲ್ಲಿ897200ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 11058ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12096ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 189 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 464 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು608 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ 04ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 388850ಕ್ಕೆ ಏರಿದೆ. ಇದುವರೆಗೂ 377443ಜನ ಗುಣಮುಖರಾಗಿದ್ದಾರೆ. 7085 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4321ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 16 ಬಳ್ಳಾರಿ 04ಬೆಳಗಾವಿ14 ಬೆಂಗಳೂರು ಗ್ರಾಮಾಂತರ 28 ಬೀದರ್‌ 06ಚಾಮರಾಜನಗರ 12 ಚಿಕ್ಕಬಳ್ಳಾಪುರ 29ಚಿಕ್ಕಮಗಳೂರು 08ಚಿತ್ರದುರ್ಗ 39ದಕ್ಷಿಣ ಕನ್ನಡ 27 ದಾವಣಗೆರೆ 10 ಧಾರವಾಡ 05 ಗದಗದಲ್ಲಿ 12ಹಾಸನದಲ್ಲಿ 20 ಹಾವೇರಿ 02 ಕಲಬುರಗಿ 11 ಕೊಡಗು07, ಕೋಲಾರ 14 ಕೊಪ್ಪಳ 00ಮಂಡ್ಯ 13 ಮೈಸೂರು26 ರಾಯಚೂರು 03ರಾಮನಗರ 00 ಶಿವಮೊಗ್ಗ 20 ತುಮಕೂರು 32 ಉಡುಪಿ 14, ಉತ್ತರ ಕನ್ನಡ 16 ವಿಜಯಪುರ 19 ಹಾಗೂ ಯಾದಗಿರಿಯಲ್ಲಿ 06ಪ್ರಕರಣಗಳು ಪತ್ತೆಯಾಗಿವೆ.