ಕರೋನಾ:ಹೊಸಪೇಟೆಯಲ್ಲಿ ಮತ್ತೆ ಮುಂದುವರೆದ ಪೊಲೀಸ್ ಪಹರೆ

ಹೊಸಪೇಟೆ ಜೂ11: ಇನ್ನು 3 ದಿಗಳ ಕಾಲ ಲಾಕ್‍ಡೌನ್ ಇದ್ದರೂ ಜನರ ಸಂಚಾರ ಮುಂದುವರೆದಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕಠಿಣ ನಿರ್ಭಂಧ ಮುಂದುವೆಸಿರುವ ಪೊಲೀಸರು ನಗರದ ಬಹುತೇಕ ವೃತ್ತಗಳು ಹಾಗೂ ಮುಖ್ಯ ರಸ್ತೆಯಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿದ್ದರು.
ದಿನಸಿ, ತರಕಾರಿ, ಹಾಲು ಹಣ್ಣು, ಅಗತ್ಯ ವಸ್ತುಗಳು ಸೇರಿದಂತೆ ಯಾವುದೆ ಅಂಗಡಿ ಮುಂಗಟ್ಟುಗಳು ಇಲ್ಲದಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಮಾತ್ರ ಒಂದಲ್ಲಾ ಒಂದು ನೆಪೆಹೇಳಿಕೊಂಡು ತಿರುಗುತ್ತಿರುವ ಹಿನ್ನೆಲೆಯಲ್ಲಿ ಈ ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ. ಕೋವಿಡ್ ಕಾರ್ಯಕ್ಕೆ ನಿಯುಕ್ತಿಗೊಂಡ ಕೆಲಸಗಾರರನ್ನು ಬಿಟ್ಟು ಉಳಿದಂತೆ ಅನೇಕರು ಅನೇಕ ಕಾರಣಗಳನ್ನು ಹೇಳುತ್ತಲೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇಂದು ಬಿಗಿ ಕ್ರಮಕ್ಕೆ ಮುಂದಾದರು ದ್ವಿಚಕ್ರವಾಹನ ಸವಾರರು ಸೇರಿದಂತೆ ಅನಗತ್ಯ ತಿರುಗುವವರನ್ನು ವಶಕ್ಕೆ ಪಡೆದು ವಾಹನಗಳನ್ನು ಜಪ್ತುಮಾಡುವ ಕೆಲಸಕ್ಕೆ ಮುಂದಾಗಿದ್ದರು.
ಮಹಾಮಾರಿಗೆ ಬ್ರೆಕ್
ಈ ವರೆಗೂ 3ಅಂಕಿಯಲ್ಲಿರುತ್ತೀದ್ದ ಸೋಂಕಿತ ಸಂಖ್ಯೆ ಇದೀಗ 2ಅಂಕಿಗೆ ತಲುಪಿದ್ದರೂ ಸಹ ಕಳೆದ ನಾಲ್ಕೈದು ದಿನಗಳಿಂದ ಹೊಸಪೇಟೆಯಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಿರುವುದು ಸಹ ಒಂದು ರೀತಿಯ ಆತಂಕಕ್ಕೆ ಕಾರಣವಾಗಿತು. ಆದರೆ ಇದೀಗ ಒಟ್ಟು ಸಕ್ರೀಯ ಪ್ರಕರಣಗಳೇ 760 ಆಗಿ ಅವಿಭಾಜಿತ ಬಳ್ಳಾರಿ ಜಿಲ್ಲೆಯ ಪ್ರಕರಣಗಳೇ 4393 ಇರುವುದು ಒಂದು ಹಂತದ ನೆಮ್ಮದಿ ನೀಡಿದ್ದರೂ ಅನ್‍ಲಾಕ್ ಸಂಖ್ಯೆ ವೃದ್ಧಿಯಾಗಲು ಕಾರಣವಾಗದಿದ್ದರೆ ಸಾಕು.

ಮೈಮರೆತ ಜಿಂದಾಲ್
ಕರೋನಾ ಮಹಾಮಾರಿ ಬಂದಾಗಿನಿಂದಲೂ ಸಂಪೂರ್ಣ ವಾಹನಗಳನ್ನು ಸ್ಥಗಿತಗೊಳಿಸಿದ್ದ ಜಿಂದಾಲ ಇದೀಗ ಖಾಸಗಿ ವಾಹನಗಳ ಮೂಲಕ ಸಂಚಾರ ಆರಂಭಿಸಿದ್ದರೂ ಅದೇಕೋÀ ಕರೋನಾ ಮಹಾಮಾರಿಯ ನಿಯಮವಾಳಿಗಳನ್ನು ಮರೆತಂತಿದೆ. ತನ್ನ ವಾಹನದಲ್ಲಿ ವಾಹನದ ಸಾಮಥ್ರ್ಯಕ್ಕೂ ಮೀರಿ ನೌಕರರನ್ನು ತುಂಬುವ ಮೂಲಕ ಸಾಮಾಜಿಕ ಅಂತರವನ್ನು ಮೆರತಂತೆ ತೋರಿತು ಶುಕ್ರವಾರವಾದ ಇಂದು 11 ಗಂಟೆಗೆ ಜಿಂದಾಲ್‍ಗೆ ಹೋದ ವಾಹನದಲ್ಲಿ ಅಂದಾಜು 100ಕ್ಕೂ ಹೆಚ್ಚು ನೌಕರರು ಒಂದೆ ಬಸ್‍ನಲ್ಲಿ ಪ್ರಯಾಣ ಮಾಡುತ್ತಿರುವುದ ಕಂಡುಬಂತು. ಸಂಸ್ಥೆ ಗಮನಿಸೇ ಇಲ್ಲವೂ ಹೊಸಪೇಟೆಯಲ್ಲಿ ಅಧಿಕಾರಿಗಳು ಗಮನಿಸಿಲ್ಲವೂ ಒಟ್ಟಾರೆ ತುಂಬಿತುಳುಕುವ ಸಿಬ್ಬಂದಿ ಅನೇಕ ರೀತಿಯಲ್ಲಿ ಸೋಂಕು ಹರಡಲು ಕಾರಣವಾದರೂ ಅಚ್ಚರಿಯಿಲ್ಲವಾಗಿದೆ.