ಕರೋನಾದಿಂದಾಗಿ ಕಲಾವಿದರಿಗೆ ವೇದಿಕೆ ಇಲ್ಲದೆ ಜೀವನ ಸಂಕಷ್ಟಕ್ಕೆ

ಸಿರುಗುಪ್ಪ, ಡಿ.25 : ನಗರದ ಗುರುಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ರಂಗಕಲಾ ತರಬೇತಿ ಸಂಶೋಧನಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ಪಾಂಡುವನವಾಸ ಬಯಲುನಾಟಕ ಪ್ರದರ್ಶನ, ಸ್ವರಾಲಂಕಾರ ಸಾಂಸ್ಕೃತಿ ಬಯಲಾಟ ಕಲಾಟ್ರಸ್ಟ್ ಅಧ್ಯಕ್ಷ ಜಿ.ವೀರನಗೌಡರ ರಂಗಗೀತೆಗಳ ಧ್ವನಿ ಮುದ್ರಿಕೆ ಬಿಡುಗಡೆ ಹಾಗೂ ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನ ಸಮಾರಂಭಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ ದೀಪಾ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಲೆಯು ಎಲ್ಲಾರನ್ನು ಕೈ ಬಿಸಿ ಕರೆಯುತ್ತದೆ, ಅದರಲ್ಲಿ ಕೆಲವರಿಗೆ ನೆಲೆಕೊಡುತ್ತದೆ, ಕರೋನಾ ವೈರಸ್‍ನಿಂದಾಗಿ ವೇದಿಕೆಗಳು ಇಲ್ಲ, ಹಿರಿಯ ಕಲಾವಿದರಿಗೆ ಸರ್ಕಾರದ ಮಾಶಾಸನವಿಲ್ಲದೆ ನೆಲೆ ಕಂಡುಕೊಂಡ ಕಲಾವಿದರ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ, ಸರ್ಕಾರವು ಮಾಶಾಸನವನ್ನು ನೀಡಿ ಕಲಾಪೋಷಣೆ ಮಾಡಬೇಕು ಒತ್ತಾಯಿಸಿದರು.
ಕುಡುದರಹಾಳ್ ತಾಯಮ್ಮ ದೇವಿ ಪುಣ್ಯಾಶ್ರಮದ ಪೀಠಾಧ್ಯಕ್ಷ ಡಾ.ಶಿವಕುಮಾರ ತಾತಾ ಮಾತನಾಡಿ ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಒಳಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್ ಸ್ವರಾಲಂಕಾರ ಸಾಂಸ್ಕೃತಿ ಬಯಲಾಟ ಕಲಾಟ್ರಸ್ಟ್ ಅಧ್ಯಕ್ಷ ಜಿ.ವೀರನಗೌಡರ ರಂಗಗೀತೆಗಳ ಧ್ವನಿ ಮುದ್ರಿಕೆ ಬಿಡುಗಡೆಗೋಳಿಸಿ ಮಾತನಾಡಿದ ಅವರು ಎಲ್ಲಾ ಕಲಾವಿದರು ಒಂದು ಕಡೆ ಸೇರುವುದು ಅಪರೂಪವಾಗಿರುತ್ತದೆ ಆದರೆ ಹಿರಿಯ ಬಯಲಾಟ ಕಲಾವಿದರ ಸಾಹಸದಿಂದಾಗಿ ಎಲ್ಲಾ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕೂಡಿಸಿ ಗೌರವಿಸುವುದು ನಮ್ಮ ಭಾಗ್ಯವಾಗಿದೆ ಎಂದು ಹೇಳಿದರು.
ಬಾಗಲಕೋಟೆ ಬಯಲಾಟ ಅಕಾಡೆಮಿಯ ಸದಸ್ಯ ಕರಿಶೆಟ್ಟಿ ರುದ್ರಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪ್ರಾಧಿಕಾರ ಇಂತರಹ ಕಲೆಗಳಿಗೆ ವಿಶೇಷ ಪ್ರೋತ್ಸಹ ನೀಡುತ್ತಾ ಬಂದಿದೆ, ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕಲಾ ಚಟುವಟಿಕೆ ನಿರಂತರ ನಡೆಯಬೇಕೆಂದು ತಿಳಿಸಿದರು, ಕಲಾ ಅಕಾಡೆಮಿಯಲ್ಲಿರುವ ವಿವಿಧ ಸೌಲಭ್ಯಗಳನ್ನು ಕಲಾವಿದರು ಬಳಸಿಕೊಳ್ಳುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಸಿರುಗುಪ್ಪ ಹಾರ್ಮೋನಿಯಂ ವಾದಕ ಮದಿರೆ ಮರಿಸ್ವಾಮಿ, ಬೆಂಗಳೂರು ಹಿಂದೂಸ್ತಾನ ಗಾಯಕ ಪಂಡಿತ್ ದೇವೇಂದ್ರಕುಮಾರ, ಬಳ್ಳಾರಿ ರಂಗಭೂಮಿ ಕಲಾವಿದೆ ಸುಜಾತ, ಸಿರುಗುಪ್ಪ ರಂಗಭೂಮಿ ಕಲಾವಿದ ಬೀರಳ್ಳಿ ರಾಮರೆಡ್ಡಿ, ಗುಂಡುಲುವದ್ದಿಗೇರಿ ರಂಗಭೂಮಿ ಕಲಾವಿದ ತಿಮ್ಮರೆಡ್ಡಿ, ಕರೂರು ರಂಗಭೂಮಿ ಕಲಾವಿದ ಆರ್.ನಾಗರೆಡ್ಡಿ, ಸಂಡೂರು ಹಾರ್ಮೋನಿಯಂ ವಾದಕ ಮೌನ ಆರ್ಚಾರಿ, ಚಳ್ಳೆಕೂಡ್ಲುರು ಹಾರ್ಮೋನಿಯಂ ವಾದಕ ಸಿ.ಟಿ.ಬಸವನಗೌಡ, ಕೊತ್ತಲಚಿಂತೆ ಜನಪದ ಕಲಾವಿದ ಮುದುಕಪ್ಪ, ಬಾದನಹಟ್ಟಿ ಹಾರ್ಮೋನಿಯಂ ಕಲಾವಿದ ಶಿವನಗೌಡ, ಎಮ್ಮಿಗನೂರು ಕಲಾವಿದ ಎಂ.ಬಸಪ್ಪ, ಎಮ್ಮಿಗನೂರು ಹಾರ್ಮೋನಿಯಂ ಕಲಾವಿದ ಶ್ರೀನಿವಾಸ ಸ್ವಾಮಿ, ಕಲಾವಿದೆ ನಾಗರತ್ನಮ್ಮ ಸೇರಿದಂತೆ ಇತರೆ ಕಲಾವಿದರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದವತಿಯಿಂದ ಸ್ವರಾಲಂಕಾರ ಸಾಂಸ್ಕೃತಿ ಬಯಲಾಟ ಕಲಾಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ರಂಗಭೂಮಿ ಕಲಾವಿದ ರಂಗಗೀತೆಗಳ ರಚನೆಕಾರ ಜಿ.ವೀರನಗೌಡರ ಅವರ 45ವರ್ಷ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಉತ್ತಮ ರಂಗಭೂಮಿಯ ಕಲಾ ಸೇವೆ ಸಲ್ಲಿಸಿದ ಇವರಿಗೆ ತಾಲೂಕು ಮಟ್ಟದ “ರಂಗಭೂಮಿರತ್ನ” ಪ್ರಶಸ್ತಿಯನ್ನು ಕಸಾಪ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ ನೀಡಿ ಗೌರವಿಸಿದರು.
ಪಾಂಡುವನವಾಸ ಬಯಲಾಟ ನಾಟಕ ಪ್ರದರ್ಶನವನ್ನು ಬಾಲಕೃಷ್ಣ ಪಾತ್ರ ಕೆ.ಎಸ್.ಜನಾರ್ಧನ, ಧರ್ಮರಾಜ ಪಾತ್ರ ಎಂ.ಮಾಚಿದೇವ, ಭೀಮಸೇನ ಪಾತ್ರ ವೀರೇಶ, ಅರ್ಜುನ ಪಾತ್ರ ಕೆ.ನೀಲಕಂಠ, ವೇದವ್ಯಾಸ ಪಾತ್ರ ಯಮುನಪ್ಪ, ಜಟಸೂರ ಪಾತ್ರ ಸಿ.ವಸಿಗೇರಪ್ಪ, ದ್ರೌಪತಿ ಪಾತ್ರ ಕೋಟೆ ಅಂಜಿನಮ್ಮ, ಮೃದಂಗವಾದಕ ಬಸವರಾಜ, ತಬಲ ಎರ್ರಿನಾಗೇಶ, ಸಾರಥಿ ಜಡೆಪ್ಪ, ಹಿನ್ನೆಲೆ ಗಾಯಕರಾದ ದೊಡ್ಡಬಸಪ್ಪ, ಈರಣ್ಣ, ಹೇಮಣ್ಣ, ಸಂಗೀತ ನಿರ್ದೇಶಕ ಜಿ.ವೀರನಗೌಡ ಇವರು ಅದ್ಬುತವಾಗಿ ನಾಟಕ ಪ್ರದರ್ಶಿಸಿದರು.
ಉಡೆಗೋಳ ಗ್ರಾಮದ ತಾಲೂಕು ಮುಖಂಡ ಕಾಂತಪ್ಪ ಅವರು ಕಲಾವಿದ ಜಿ.ವೀರನಗೌಡ ಅವರಿಗೆ ಕಲಾ ಪ್ರೋತ್ಸಹಕ್ಕೆ 20ಸಾವಿರ ನಗದು ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ ಬಳಿಗಾರ್, ಜೆ.ನರಸಿಂಹಮೂರ್ತಿ, ಡಾ.ಚೇತನಕುಮಾರ, ವೀರೂಪಾಕ್ಷಿಗೌಡ, ಡಾ.ಈರಣ್ಣ, ಕೆ.ಎಂ.ಚಂದ್ರಕಾಂತ, ಬಸವನಗೌಡ, ದಿವಾಕರನಾರಾಯಣ, ಹೆಚ್.ತಿಪ್ಪೆಸ್ವಾಮಿ, ಶರಣಪ್ಪ ಗಾವಾಯಿ, ಎರ್ರೆಪ್ಪ ಸೇರಿದಂತೆ ಜಿಲ್ಲೆಯ ಕಲಾವಿದರು ಭಾಗವಹಿಸಿದ್ದರು.