ಕರೋಕೆ ಸ್ವರಸಂಭ್ರಮ ಡಿ.೧೦ ರಂದು ಪೈನಲ್ ಸ್ಪರ್ಧೆ-ದೀಪಾಶ್ರೀ

ಮಾನ್ವಿ.ಡಿ.೦೬- ತಾಲೂಕಿನ ಶ್ರೀರಾಗ ಕರೋಕೆ ಸ್ಟೂಡಿಯೋದಿಂದ ನಡೆಯುತ್ತಿರುವ ರಾಜ್ಯಮಟ್ಟದ ಕರೋಕೆ ಸ್ವರಸಂಭ್ರಮವು ಡಿ.೧೦ ರಂದು ಪಟ್ಟಣದ ಸಿಂಧನೂರು ರಸ್ತೆಯ ಧ್ಯಾನ ಮಂದಿರದಲ್ಲಿ ನಡೆಯಲಿದೆ ಎಂದು ಆಯೋಜಕಿ ದೀಪಾಶ್ರೀ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಕೂಡ ರಾಜ್ಯಮಟ್ಟದ ಕರೋಕೆ ಸಂಭ್ರಮವನ್ನು ಆಯೋಜನೆ ಮಾಡಲಾಗಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ಎಲೆಮರೆ ಕಾಯಿಯಂತೆ ಇರುವಂತಹ ಗಾಯಕರನ್ನು ಗುರುತಿಸುವ ಉದ್ದೇಶದಿಂದ ಆಯೋಜನೆ ಮಾಡಲಾಗಿದ್ದು ಪೈನಲ್ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗದ ೩೭ ಗಾಯಕರು ಆಯ್ಕೆಯಾಗಿದ್ದು ಅಂತಿಮ ಮೂರು ವಿಜೇತರಿಗೆ ೨೦೦೦೧, ೧೦೦೦೧,೫೦೦೧ ಸಾವಿರ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಗುತ್ತದೆ ಎಂದರು.
ಈ ಕಾರ್ಯಕ್ರಮಕ್ಕೆ ನಿರ್ಣಾಯಕವಾಗಿ ಝೀ ಕನ್ನಡದ ಜೀ ಕನ್ನಡ ವಾಹಿನಿಯ ರಾಮ ಕಾಸರ್, ವಿಜಯ ಬಡಿಗೇರ ಆಗಮಿಸುತ್ತಿದ್ದಾರೆ ಹಾಗೂ ಇದಕ್ಕೆ ಪ್ರಮುಖವಾಗಿ ಕಲ್ಮಠದ ಶ್ರೀಗಳ ಆಶಿರ್ವಾದ ಮತ್ತ ಶಾಸಕ ಜಿ.ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಎಂ.ಈರಣ್ಣ, ತಿಮ್ಮರಡ್ಡಿ ಗೌಡ ಬೋಗವತಿ, ವಿರೇಶ ನಾಯಕ ಬೆಟ್ಟದೂರು, ಅರುಣ್ ಕುಮಾರ್ ಬಲ್ಲಟಿಗಿ, ಶಾಖಾ ಸಬ್ಜಲಿ ಪುರಸಭೆ ಸದಸ್ಯ, ಮುತ್ತುರಾಜ ಶೆಟ್ಟಿ ಸಹಕಾರ ಇದೆ ಎಂದರು. ಈ ಸಂದರ್ಭದಲ್ಲಿ ಗಾಯಕರಾದ ಮಲ್ಲಿಕಾರ್ಜುನ,ಮಹೆಬೂಬ್ ಎಂ ಎಫ್ ಸಿ, ಗಿರೀಶಜೋಶಿ, ಅಜ್ಮೀರ ಪಾಷ ಇದ್ದರು.