ಕಲಬುರಗಿ :ಜೂ.13:ನಗರದ ಗೋಲ್ಡ್ ಹಬ್‍ನಲ್ಲಿ ಗಾನ ಲಹರಿ ಸಂಸ್ಥೆ ತನ್ನ ಸ್ಟುಡಿಯೋದಲ್ಲಿ ಡಾ. ಎಸ್.ಪಿ.ಬಾಲಸುಬ್ರಮಣ್ಯಂ ಜನ್ಮದಿನ ಆಚರಣೆ ಅಂಗವಾಗಿ ಏರ್ಪಡಿಸಿದ ಕರೋಕೆ ಸಂಗೀತ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಹಿರಿಯ ಗಾಯಕ ಮಲ್ಲಿಕಾರ್ಜುನ ಘನಾತೆ ಪ್ರಮಾಣ ಪತ್ರ ವಿತರಿಸಿದರು. ವೇದಿಕೆಯಲ್ಲಿ ಗಾನ ಲಹರಿ ಸಂಸ್ಥೆ ಅಧ್ಯಕ್ಷ ಲಕ್ಮೀಕಾಂತ ಸೀತನೂರ, ಸಂಪನ್ಮೂಲ ವ್ಯಕ್ತಿ ಜನಪ್ರಿಯ ಗಾಯಕಿ ರೂಪಶ್ರೀ ಬೆಂಗಳೂರು ಇದ್ದರು.
ಎಂ. ಸಂಜೀವ ಕಲಬುರಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿರಣ ಪಾಟೀಲ, ನರಸಿಂಹಚಾರಿ ಮುಪ್ಪಾರಂ, ಮಹಾಲಿಂಗ, ಸತೀಷ ಪಾಟೀಲ ಮಹಾಂತೇಶ ಪಾಟೀಲ, ನಾರಾಯಣ. ಎಂ .ಜೋಶಿ ಇದ್ದರು.