ಕರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆ

*ಮಕ್ಕಳತೀವ್ರ ನಿಘಾ ಘಟಕ, ೧೦ಬೆಡ್ ವ್ಯವಸ್ಥೆ
ದೇವದುರ್ಗ.ಜ.೧೪-ಮಹಾಮಾರಿ ಕರೊನಾ ಎರಡೂ ಅಲೆಗಳು ತಾಲೂಕಿಗೆ ಭಾರಿ ಹೊಡೆತ ನೀಡಿದ್ದವು. ಮೂರನೇ ಅಲೆ ಮುನ್ಸೂಚನೆ ಅರಿತ ತಾಲೂಕು ಆರೋಗ್ಯ ಇಲಾಖೆ, ಅದರ ತಡೆಗೆ ಸನ್ನದ್ಧವಾಗಿದೆ.
ಮೊದಲ ಅಲೆಯಲ್ಲಿ ಮಹಾರಾಷ್ಟ್ರದ ನಂಜು ವಿಷದಂತೆ ಕಾಡಿದ್ದು ಮಾತ್ರವಲ್ಲ ಜಿಲ್ಲೆಯಲ್ಲೇ ಅತಿಹೆಚ್ಚು ಸೋಂಕು ಹರಡಿತ್ತು. ಎರಡನೇ ಅಲೆಯಲ್ಲೂ ಸಾವಿನೋವಿನ ಸಂಖ್ಯೆಹೆಚ್ಚಾಗಿತ್ತು. ಆರೋಗ್ಯ ಇಲಾಖೆ ಎಲ್ಲ ಹಾಸ್ಟೆಲ್‌ಗಳನ್ನು ವಶಕ್ಕೆ ಪಡೆದು ಕೋವಿಡ್ ಕೇರ್‌ಸೆಂಟರ್, ಕ್ವಾರಂಟೈನ್ ಕೇಂದ್ರ ಆರಂಭಿಸಿ ರೋಗ ನಿಯಂತ್ರಣಕ್ಕೆ ತಂದಿತ್ತು.
ರಾಜ್ಯದಲ್ಲಿ ಮೂರನೇ ಅಲೆ ವಿಜೃಂಭಿಸುತ್ತಿದ್ದು, ತಾಲೂಕಿನಲ್ಲೂ ಅದರ ಬಿಸಿತಟ್ಟುತ್ತಿದೆ. ಆರೋಗ್ಯ ಇಲಾಖೆ ಇದರ ತಡೆಗೆ ಮುಂದಾಗಿವೆ. ವಿದ್ಯಾರ್ಥಿಗಳು ಸೇರಿ ತಾಲೂಕಿನಲ್ಲಿ ಸುಮಾರು ೧೦ಪ್ರಕರಣಗಳು ಪತ್ತೆಯಾಗಿವೆ. ಇದರ ತಡೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ೪೦ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.
೫ವೆಂಟಿಲೇಟರ್‌ಗಳು, ಮೂರು ಐಸಿಯು ವಾರ್ಡ್ ತೆರೆಯಲಾಗಿದೆ. ಆಕ್ಸಿಜನ್ ಪ್ಲಾಂಟ್ ಆರಂಭಿಸಿದ್ದು, ಅಗತ್ಯ ಆಕ್ಸಿಜನ್ ಉತ್ಪದನಾ ಸಾಮರ್ಥ್ಯ ವೃದ್ಧಿಸಲಾಗಿದೆ. ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ವಶಕ್ಕೆ ಪಡೆದು ಕೋವಿಡ್ ಕೇರ್ ಸೆಂಟರ್ ತೆಗೆಯಲು ಮುಂದಾಗಿದೆ.
ಫ್ರಂಟ್‌ಲೈನ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ೭೫೭ಹೆಲ್ತ್‌ವರ್ಕರ್‍ಸ್, ೨೧೬ಫ್ರಂಟ್‌ಲೈನ್ ವಾರಿಯರ್ಸ್ ಹಾಗೂ ೧೨೧ಹಿರಿಯ ನಾಗರಿಕರು ಸೇರಿ ೧೦೯೪ಜನರಿಗೆ ಮೂರನೇ ಡೋಸ್ ನೀಡಲಾಗುತ್ತಿದೆ. ೩ದಿನಗಳಲ್ಲಿ ಉತ್ತಮ ಸ್ಪಂದನೆಯಿದ್ದು ೧ವಾರದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಗುರಿಹೊಂದಿದೆ.
ಏನಿದು ಮಕ್ಕಳ ನಿಘಾ ಘಟಕ?
ಮೂರನೇಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ ಹಿನ್ನೆಲೆ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ನೆರವಿನಿಂದ ಮಕ್ಕಳ ತೀವ್ರ ನಿಘಾ ಘಟಕ ಆರಂಭಿಸಲಾಗಿದೆ. ಇದಕ್ಕೆ ೧೦ಬೆಡ್ ವ್ಯವಸ್ಥೆ ಮಾಡಿದ್ದು, ಆಕ್ಸಿನ್, ವೆಂಟಿಲೇಟರ್ ಸೇರಿ ಎಲ್ಲ ಸಿದ್ಧತೆ ಮಾಡಲಾಗಿದೆ. ೧ಐಸಿಯು ವೆಂಕಟಿಲೇಟರ್, ತಲಾ ೨ಟ್ರೆಸ್ಸಿಂಗ್, ಸಲಕರಣೆ ಘಟಕ, ತಲಾ ೧೦ಬೆಡ್, ಐವಿ ಸ್ಟ್ಯಾಂಡ್, ತಲಾ ೧ಇಸಿಜಿ ಮಿಸಿನ್, ಮೊಬೈಲ್ ಎಕ್ಸ್‌ರೇ, ಎಲ್‌ಇಡಿ ಎಕ್ಸ್‌ರೇ ವಿವ್, ಡಿಜಿಟಲ್ ವೆವಿಂಗ್ ಮಿಷನ್, ೪ಮಲ್ಟಿ ಚಾನೆಲ್ ಮಸೀನ್, ಎಮರ್ಜೆನ್ಸಿ, ಇನ್ವೇಟರ್, ಚೇರ್ ಸೇರಿ ಸುಮಾರು ೨೦ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ತೀವ್ರ ನಿಘಾ ಘಟಕ ಪ್ರಾರಂಭಿಸಲಾಗಿದೆ.

ಕೋಟ್====
ಕರೊನ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದು, ತುರ್ತಾಗಿ ೪೦ಬೆಡ್, ೫ವೆಂಟಿಲೆಟರ್, ೩ಐಸಿಯು ಘಟಕ ಆರಂಭಿಸಲಾಗಿದೆ. ಆಕ್ಸಿಜನ್ ಘಟಕ ಸಿದ್ಧವಿದ್ದು, ೧೦೯೪ಜನರಿಗೆ ತುರ್ತಾಗಿ ಮೂರನೇ ಡೋಸ್ ನೀಡಲಾಗುತ್ತಿದೆ. ಜನರು ಎಚ್ಚರಿಕೆಯಿಂದ ಇದ್ದು, ನಮಗೆ ಸಹಕಾರ ನೀಡಬೇಕು.
| ಡಾ.ಬನದೇಶ್ವರ
ಟಿಎಚ್‌ಒ