ಕರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಿರಿಯರು ಮನೆಯಲ್ಲಿಯೇ ಸುರಕ್ಷಿತವಾಗಿರಬೇಕು: ಡಾ. ಆನಂದ ಅಂಬಲಿ

ವಿಜಯಪುರ, ಏ.22-ಕರ್ನಾಟಕ ರಾಜ್ಯ ಸರಕಾರಿ ನಿವೃತ್ ನೌಕರರ ಸಂಘ ವಿಜಯಪುರದ ಮಾಸಿಕ ಸಭೆ ಓಉಔ ಹಾಲ್‍ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಆನಂದ ಅಂಬಲಿ ಃಐಆಇಂ ಆಸ್ಪತ್ರೆಯ ಜಿರಿಯಾ ಟ್ರೀಕ್ ವಿಭಾಗದ ಮುಖ್ಯಸ್ಥರು ಇಂದಿನ ಕರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಿರಿಯರಾದವರು ಕಡ್ಡಾಯವಾಗಿ ಮಾಸ್ಕ ಧರಿಸಬೆಕು, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು, ಸ್ಯಾನಿಟೈಜರ್ ಬಳಸಬೇಕು, ಮನೆಗೆ ಬಂದ ತಕ್ಷಣ ಸ್ವಚ್ಛವಾಗಿ ಕೈ ಕಾಲು ಮುಖ ತೊಳೆದುಕೊ¼ಸÀ್ಲಬೇಕು, ಮತ್ತೆ ಅನವಶ್ಯಕವಾಗಿ ಹೊರಗಡೆ ತಿರುಗಾಡಬಾರದು, ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಆನಂದ.ಅಂಬಲಿ ಅವರು ರಾಷ್ಟ್ರೀಯ ಜಿರಿಯಾಟ್ರೀಕ್ ಸಂಘದ ಉಪಾದ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕಾಗಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಅದ್ಯಕ್ಷರಾದ ಎಸ್.ಪಿ.ಬಿರಾದಾರ ಕಡ್ಲೆವಾಡ ಅವರು ಕೇಂದ್ರ ಸಂಘದ ಸುತ್ತೋಲೆಗಳ ಕುರಿತಾಗಿ, ಸದಸ್ಯರೊ0ದಿಗೆ ಚರ್ಚಿಸಿದರು. ಮತ್ತು ಸದಸ್ಯರ ಸಹಕಾರದಿಂದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಲು ಸಾದ್ಯವೆಂದು ಹೇಳಿದರು.
ಎಸ್.ಆರ್.ಮಾನಕರ ಪ್ರಾರ್ಥಿಸಿದರು. ಡಿ.ಬಿ.ಹಿರೆಕುರುಬರ ಸ್ವಾಗತಿಸಿದರು. ವ್ಹಿ.ಎಸ್.ಸಾವಳಗಿಮಠ ವಂದಿಸಿದರು. ಭರತೇಶ ಕಲಗೊಂಡ ನಿರೂಪಿಸಿದರು.
ಸಭೆಯಲ್ಲಿ, ಎಸ್.ಎ. ಹೂಗಾರ ಎನ್.ಅಯ್ ಪಾಟೀಲ, ಕೆ.ಎ.ದುಧಗಿ, ಎಸ್.ವೈ.ನಡುವಿನಕೆರಿ, ಬಿ.ಎಂ.ಮುಬೈ.ಮಶಿಬಿನಾಳ, ಎಂ.ಎ.ಭಕ್ಷಿ, ಆರ್.ಬಿ.ಒಲೆಕಾರ, ಎಂ.ಎ.ಇಂಡಿಕರ, ಎಸ್.ಸಿ. ಕಮತಗಿ, ಎಂ.ಎನ್.ಜಂಗಮಶೆಟ್ಟಿ, ಎಂ.ಆರ್.ಬಗಲಿ, ಶ್ರೀಮತಿ ಎ.ವ್ಹಿ.ಹೊಸೂರ ಶ್ರೀಮತಿ.ಎಂ.ಎಚ್.ಉಂಕಿ ಮುಂತಾದವರು ಹಾಜರಿದ್ದರು.