ಕರೇಮ್ಮ ನಾಯಕ ಶಾಸಕರಾಗಲೆಂದು ಶಿವಕುಮಾರ ಕೇಶ ಮಂಡನೆ

ಸಿರವಾರ,ಮಾ.೧೨- ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗ ವಿಧಾನ ಸಭೆಯಿಂದ ಜೆ.ಡಿ.ಎಸ್. ನಿಯೋಜಿತ ಅಭ್ಯರ್ಥಿ ಕರೆಮ್ಮ ನಾಯಕ ಅವರು ಅಧಿಕ ಮತಗಳ ಅಂತರದಿಂದ ಗೆಲ್ಲಬೇಕು ಎಂದು ನಾಗಡದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡದಿನ್ನಿ ಗ್ರಾಮದ ದೇಸಾಯಿ ಕವಲಿ ಹಾಗೂ ಶಿವಕುಮಾರ ಶಾಂವತಗಲ್ ಅವರು ತೆಲಂಗಾಣದ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಲ್ಲಿ ಕೇಶ ಮಂಡನೆ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.