ಕರೆಯಲ್ಲಿ ಬಿರುಕ ಕಳಪೆ ಕಾಮಗಾರಿ ಕಾರಣ:ಜೆಡಿಎಸ್

ಚಿಂಚೋಳಿ,ಆ.2- ತಾಲೂಕಿನ ನಾಗಯಿದಲಾಯಿ ಗ್ರಾಮದ ಸಣ್ಣ ನೀರಾವರಿ ಯೋಜನೆಯಲ್ಲಿ ಸುಮಾರು 4 ಕೋಟಿಯಲ್ಲಿ ನಿರ್ಮಿಸಲಾದ ಕೆರೆಯು ಬಿರುಕು ಕಂಡು ಗ್ರಾಮಸ್ಥರು ಭಯಭೀತರಾಗಿದ್ದು, ಗ್ರಾಮಕ್ಕೆ ಜೆಡಿಎಸ್ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ, ಭೇಟಿ ನೀಡಿ ಸ್ಥಳ ಪರಿಶಿಸಿದರು, ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿದರು.
ಈ ಕೆರೆ ಸುಮಾರು 2 ವರ್ಷಗಳ ಹಿಂದೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿ ಮತ್ತು ಮನೆ ಹಾನಿ ಆಗಿದ್ದರೂ ಇಲ್ಲಿಯವರೆಗೂ ಸರ್ಕಾರದಿಂದ ಪರಿಹಾರ ಕೂಡ ದೊರಕಿಲ್ಲ.
ಸರಕಾರದಿಂದ ಈ ವರ್ಷ 2020-2021 ರಲ್ಲಿ ಸರಕಾರದಿಂದ ಕೆರೆ ದುರಸ್ತಿಗೊಳಿಸಲು 4 ಕೋಟಿ ರೂಪಾಯಿ ಬಿಡುಗಡೆಯಾಗಿ ದುರಸ್ತಿಗೊಳಿಸಿದರು ಸಂಪೂರ್ಣವಾಗಿ ಕಳಪೆಯಾಗಿರುವುದಕ್ಕೆ ಅದರಲ್ಲಿ ಕಾಣಿಸಿಕೊಂಡಿರುವ ಬಿರುಕೆ ಸಾಕ್ಷಿ, ತಕ್ಷಣವೇ ದುರಸ್ಥಿ ಕೈಗೊಳ್ಳಬೇಕು, ಹಾನಿಯನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಅವರೊಂದಿಗೆ ಸೈಯ್ಯದ್ ನಿಯಾಜ್ ಅಲಿ, ಹಣಮಂತ ರೆಡ್ಡಿ ದೋಟಿಕೋಳ್, ವಿಶ್ವನಾಥ ಪಾಟೀಲ್,ವೀರಾರೆಡ್ಡಿ ನಾಗಾಯಿದಲಾಯಿ,ಬಸವಂತರೆಡ್ಡಿ ಚಂಗೋಲಿ, ಶೇರ್ ಖಾನ್, ರಾಜಶೇಖರ ಬೋಯಿನ್, ಸುದರ್ಶನ್ ರೆಡ್ಡಿ, ವೆಂಕಟ್ ಜಾಧವ,ಕೈಲಾಸ ಮೇಲಿನಕೇರಿ, ಸೂರ್ಯಕಾಂತ್ ಪೂಜಾರಿ, ನಾಗೇಶ್ ಗಂಜಿ, ಸಂಗಮೇಶ ಪಾಟೀಲ್, ರಾಜಕುಮಾರ್, ನಾಗರಾಜ್, ಸಂತೋಷ್ ಪೂಜಾರಿ, ಹಣಮಂತ ರೆಡ್ಡಿ, ಮತ್ತು ಅನೇಕ ರೈತರು ಇದ್ದರು.