ಕರೆದರೆ ಬರುತ್ತಾರೆ ಮರಿದೇವಯ್ಯ: ಕೊಂಡಯ್ಯ

ಬಳ್ಳಾರಿ ಏ 25 : ನಗರದ 10 ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಮರಿದೇವಯ್ಯ ಅವರು ನಿಮಗೆ ಸಮಸ್ಯೆ ಇದ್ದರೆ ಕರೆದ ತಕ್ಷಣ ಓಡಿ ಬರುತ್ತಾರಾ. ಬಿಜೆಪಿ ಅಭ್ಯರ್ಥಿ ಬರುತ್ತಾರ ಎಂದು ವಾರ್ಡಿನ ಮುಖಂಡರನ್ನು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಪ್ರಶ್ನಿಸಿದ್ದಾರೆ.
ಅವರು ನಿನ್ನೆ ವಾರ್ಡಿನ ಮುಖಂಡರ ನಿವಾಸದಲ್ಲಿ ಪ್ರಮುಖ ಮುಖಂಡರ ಜೊತೆ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಮತ್ತು ಅಭ್ಯರ್ಥಿ ಮರಿದೇವಯ್ಯ ಅವರೊಂದಿಗೆ ಸಭೆ ನಡೆಸಿ. ಬಿಜೆಪಿ ಅಭ್ಯರ್ಥಿ ಎಲ್ಲಿರುತ್ತಾರೆ. ವಿದ್ಯಾನಗರದಲ್ಲಿ ಇರುತ್ತಾರೆ. ಅವರು ದುಡ್ಡು ಇದ್ದವರು, ಈಗ ದುಡ್ಡುಕೊಡಬಹುದು. ಆದರೆ ಬರುವ ಐದು ವರ್ಷ ನಿಮಗೆ ಏನಾದರೂ ಕುಡಿಯುವ ನೀರು, ರಸ್ತೆ, ಸೇರಿಂದತೆ ಏನಾದರೂ ಸಮಸ್ಯೆಯಾದರೆ ಕರೆದ ತಕ್ಷಣ ಬರುವವರು ಮರಿದೇವಯ್ಯ. ಅವರು ಬರುತ್ತಾರಾ. ಅವರ ಮನೆ ಒಳಗೆ ಹೋಗೋದೆ ಕಷ್ಟ, ಇನ್ನು ನಿಮ್ಮ ಸಮಸ್ಯೆ ಕೇಳುತ್ತಾರಾ. ಗೆಲ್ಲುವ ವರೆಗೆ ಅಷ್ಟೇ, ಅವರು ನಮ್ಮ ತಾತ ಇಲ್ಲಿದ್ದ, ಹಾಗೇ ಹೀಗೆ ಎಂದು ಹೇಳಬಹುದು. ಅವರ ಮಾತಿಗೆ ಮರುಳಾಗದೆ. ನಿಮ್ಮ ಸಮಸ್ಯೆಗಳಿಗೆ ತಕ್ಷಣಸ್ಪಂದಿಸುವ ಮರಿದೇವಯ್ಯ ಅವರನ್ನು ಮತ್ತೊಮ್ಮೆ ಗೆಲಿಸಿಕೊಳ್ಳಿ ಎಂದು ಹೇಳಿದ್ದಾರೆ.