ಕರೆಗೋಡು ಹನುಮ ಧ್ವಜ ಪ್ರಕರಣ 

ಬಳ್ಳಾರಿಯಲ್ಲಿ ಬಿಜೆಪಿ ರಸ್ತೆ ತಡೆದು ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ: ಮಂಡ್ಯಜಿಲ್ಲೆ ಕೆರಹಲಗೋಡು ಗ್ರಾಮದಲ್ಲಿ ಹನುಮ ಧ್ವಜ ಆರೋಹಣಕ್ಕೆ ಸರ್ಕಾರದ ವಿರೋಧ ಮತ್ತು ಬಿಜೆಪಿ ಕಾರಗಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಖಂಡಿಸಿ ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. 

ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಎಸ್.ಗುರುಲಿಂಗನಗೌಡ,  ಗುತ್ತಿಗನೂರು ವಿರೂಪಾಕ್ಷಗೌಡ ಶ್ರೀನಿವಾಸ್ ಮೋತ್ಕರ್, ಇಬ್ರಾಹಿಂ ಬಾಬು, ಗಣಪಾಲ್ ಐನಾಥರೆಡ್ಡಿ ಮೊದಲಾದವರು ಸೇರಿ ಮನವ ಸರಪಳಿ ಮಾಡಿ ಸರ್ಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿ ಪೊಲೀಸರ್ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿದರು. 

ಆರಂಭದಲ್ಲಿ ಇದಕ್ಕೆ ಪೊಲೀಸರು ಅಡ್ಡಿ ಪಡಿಸಲು ಮುಂದಾದಾಗ ಮುಖಂಡರು ಶಾಂತಿಯುತವಾಗಿ ನಡೆಸುವ ಪ್ರತಿಭಟನೆಗೆ ಅಡ್ಡಿ ಪಡಿಸಬೇಡಿ ಎಂದಾಗ 17 ನಿಮಿಷ ಕಾಲ ಪ್ರತಿಭಟನೆ ನಡೆಸಲಾಯ್ತು. 

ಪಾಲಿಕೆ ಸದಸ್ಯರು, ಮುಖಂಡರಾದ  ಎಸ್.ಮಲ್ಲನಗೌಡ,   ಹೆಚ್.ತಿಪ್ಪಣ್ಣ, ಹನಮಂತ, ಕುಂಟನಾಳ್ ಮಲ್ಲಿಕಾರ್ಜುನಸ್ವಾಮಿ, ಶರಣ, ವೆಂಕಟೇಶ್, ರಾಮಾಂಜಿನಿ ಮೊದಲಾದವರು ಇದ್ದರು.

One attachment • Scanned by Gmail