ಕರುಳ ಬಳ್ಳಿಯ ಜೀವ ಉಳಿಸಲು ಬಡ ಕುಟುಂಬಕ್ಕೆ ಬೇಕಿದೆ ಸಹಾಯ ಹಸ್ತ

ಕಾಗವಾಡ :ಮಾ.30: ಮೂರು ವರ್ಷದ ಮುದ್ದಾದ ಮಗುವಿನ ತಂದೆ ಹಣಮಂತ ಕಾಂಬಳೆ ಖಾಸಗಿ ಶಾಲೆಯಲ್ಲಿ ಶಿಕ್ಷಕ ತಾಯಿ ಕುಸುಮ ಗೃಹಿಣಿ ಕಡು ಬಡತನದ ಕುಟುಂಬ. ಇವರು ಮೂಲತಃ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ನಿವಾಸಿಗಳು ಹಣಮಂತನ ತಂದೆ ಕೂಲಿ ಕೆಲಸ ಮಾಡಿ ಕುಟುಂಬ ಸಾಗಿಸಿ ಮಗನ ವಿದ್ಯಾಭ್ಯಾಸ ಮುಗಿಸಿದ್ದಾರೆ ಇವರಿಗೆ ಯಾವುದೇ ಪಿತ್ರಾರ್ಜಿತ ಆಸ್ತಿ ಇಲ್ಲ ಆಸರೆಯಾಗಿ ಪುಟ್ಟ ಮನೆ ಅದರಲ್ಲೂ ಕುಟುಂಬದ ಹಿರಿಯ ಜೀವಿಗಳು ಬಿಪಿ ಶುಗರ್ (ಮದುಮೇಹ) ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂತಹ ಬಡ ಕುಟುಂಬದ ಪುಟ್ಟ ಮಗುವಿಗೆ ಒಕ್ಕರಿಸಿದ ಕಾಯಿಲೆಯಿಂದ ಇಡೀ ಕುಟುಂಬವೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಗು ರೈನೇಶ್ ಹುಟ್ಟುತ್ತಲೇ ಆರೋಗ್ಯವಾಗಿ ಹುಟ್ಟಿದ ಆದರೆ ಬರಬರುತ್ತಾ (ತಿesಛಿoಣಣ ಂಟಜಡಿiಛಿh sಥಿಟಿಜಡಿome) ಬಿಳಿ ರಕ್ತ ಕಣಗಳ ಕೊರತೆಯಿಂದ ಬಳಲುತ್ತಿದ್ದಾನೆ. ಈಗಾಗಲೇ ಮುಂಬೈನ ಪ್ರತಿಷ್ಠಿತ ಒಅಉಒ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ತಿಂಗಳಲ್ಲಿ ಆಪರೇಷನ್ ಮಾಡಬೇಕಾಗಿದೆ. ಈ ವರೆಗೂ ತನ್ನ ಪ್ರಯತ್ನ ಮೀರಿ ಆಸ್ಪತ್ರೆ ಖರ್ಚು ನಿಭಾಯಿಸಿದ ತಂದೆ ಹಣಮಂತ ಕಾಂಬಳೆ ಕೈಚೆಲ್ಲಿ ಕುಳಿತಿದ್ದಾರೆ. ಕರುಳ ಬಳ್ಳಿಯ ಜೀವ ಉಳಿಸಲು ಹಾತೋರೆಯುತ್ತಿರುವ ಹನಮಂತ ಈಗ ಸಹಾಯದ ಮೊರೆ ಕೇಳುತ್ತಿದ್ದಾರೆ. ಆಪರೇಷನ್ ಗೆ ಸು. 18 ಲಕ್ಷ ರೂ. ಖರ್ಚು ಆಗಲಿದ್ದು, ಮಗುವಿನ ಜೀವ ಉಳಿಸಲು ಕುಟುಂಬ ಚಡಪಡಿಸುತ್ತಿದೆ. ಮಗುವಿನ ಆರ್ಥನಾದಕ್ಕೆ ಕರಗುವ ಜೀವಕ್ಕೆ ಕೈ ಚಾಚಿ ಸಹಾಯ ಬೇಡುತ್ತಿರುವ ತಂದೆಗೆ ದಾನಿಗಳು ಸಹಾಯ ಚಾಚುವುದು ಅಗತ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮಗುವಿನ ತಂದೆ ಹಣಮಂತ ಅವರ ದೂರವಾಣಿ ನಂ. 9527531835 ಸಂಪರ್ಕಿಸಬಹುದಾಗಿದೆ.


ನನ್ನ ಮಗು ಬಿಳಿ ರಕ್ತ ಕಣದ ಕೊರತೆಯಿಂದ ಬಳಲುತ್ತಿದ್ದು ವೈದ್ಯರು ಆಪರೇಷನಗಾಗಿ ಸು. 18 ಲಕ್ಷ ಖರ್ಚು ಹೇಳಿದ್ದಾರೆ. ನಾನು ಬಡ ಶಿಕ್ಷಕನಾಗಿದ್ದು ಈಗಾಗಲೇ ಒಬ್ಬ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ ಎರಡನೇ ಮಗು ಸಾವು ಬದುಕಿನ ಮದ್ಯ ಒದ್ದಾಡುತ್ತಿದೆ. ನನಗೆ ನನ್ನ ಮಗ ಬೇಕು. ನನ್ನ ಮಗನ ರೋದನೆ ನನಗೆ ನೋಡಲಾಗುತ್ತಿಲ್ಲ. ನನ್ನ ಮಗನ ಪ್ರಾಣ ಉಳಿಸಲು ನಾನು ಶತಾಯ ಪ್ರಯತ್ನ ಮಾಡುತ್ತಿದ್ದೇನೆ. ದಯವಿಟ್ಟು ದಾನಿಗಳು ಸಹಕರಿಸಿ

  • ಹಣಮಂತ ಕಾಂಬಳೆ, ಮಗುವಿನ ತಂದೆ.