ಕರುಳುಬಳ್ಳಿಯ ಕಥೆ. ಸೆಕೆಂಡ್ ಲೈಫ್…

ಕರಳು ಬಳ್ಳಿಯವಕಥೆ ಹೊಂದಿರುವ ” ಸೆಕೆಂಡ್ ಲೈಫ್ ”  ಚಿತ್ರ ಸದ್ದುಗದ್ದಲದೆ ಚಿತ್ರೀಕರಣ ಪೂರ್ಣಗೊಂಡಿದೆ. ರಾಜು ದೇವಸಂದ್ರ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.

ನಿರ್ದೇಶಕ ರಾಜು ದೇವಸಂದ್ರ  ಚಿತ್ರದ ಕುರಿತು ಮಾಹಿತಿ ನೀಡಿ, ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ನಿರ್ಮಿಸಿದ್ದಾರೆ.ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಮಂಜುಳ ರಮೇಶ್  ಕಥೆ, ಚಿತ್ರಕಥೆ ಬರೆದಿದ್ದಾರೆ.ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ ಎಂದರು.

ನಾಯಕ ಆದರ್ಶ್ ಗುಂಡುರಾಜ್ ಮಾತನಾಡಿ, ವಿಭಿನ್ನ ಕಥೆಯಿರುವ ಚಿತ್ರ ನಮ್ಮದು. ಮಗು ಹುಟ್ಟಿದ ಕೆಲವೆ ದಿನಗಳಲ್ಲಿ ಕರುಳಬಳ್ಳಿಯ ಶೇಖರಿಸಿಡುವ ಕಾರ್ಯ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ಚಿತ್ರ ಮಾಡಲಾಗಿದೆ ಎಂದರು.

ಪುನೀತ್ ರಾಜಕುಮಾರ್ ನಿರ್ಮಾಣ ಮಾಡಬೇಕಾಗಿತ್ತು ಅದು ಸಾದ್ಯವಾಗಲಿಲ್ಲ. ಆದರೆ  ಪಿ.ಆರ್.ಕೆ ಮೂಲಕವೇ  ಹಾಡು ಬಿಡುಗಡೆಯಾಗುವುದು ಖುಷಿಯ ವಿಷಯ ಎಂದು ಮಾಹಿತಿ ಹಂಚಿಕೊಂಡರ ನಾಯಕಿ ಸಿಂದೂ ರಾವ್ ,ಚಿತ್ರದಲ್ಲಿ ನನ್ನದು ಕುರುಡಿಯ ಪಾತ್ರ.ನಿರ್ದೇಶಕರು ಕಥೆ ಬಗ್ಗೆ ಏನು ಹೇಳಿಲ್ಲ. ಪಾತ್ರದ ಕುರಿತು ಮಾತ್ರ ಹೇಳಿದ್ದಾರೆ ಎಂದರು.

ಸಂಗೀತ ನಿರ್ದೇಶಕ ಆರವ್ ಕೌಶಿಕ್, ಛಾಯಾಗ್ರಹಕ ರಮೇಶ್ ಕೊಯಿರ ಹಾಗೂ ನಟ ಶಿವಪ್ರದೀಪ್, ನವೀನ್ ಶಕ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.